ಎಲ್ಲರಿಗೂ ಸಿಎಂ ಆಗುವ ಅವಕಾಶವಿದೆ: ಹೈಕಮಾಂಡ್ ನಿರ್ಧಾರವೇ ಅಂತಿಮ- ಸಚಿವ ಎಂ.ಸಿ ಸುಧಾಕರ್

ನವದೆಹಲಿ,ಫೆಬ್ರವರಿ,3,2025 (www.justkannada.in): ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಶಾಸಕ  ಬಾಲಕೃಷ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಎಲ್ಲರಿಗೂ ಸಿಎಂ ಆಗುವ ಅವಕಾಶವಿದೆ. ಆದರೆ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಸಿ ಸುಧಾಕರ್, ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಬಾಲಕೃಷ್ಣ ಹೇಳಿದ್ದಾರೆ.  ಆದರೆ ಯಾವಾಗ ಸಿಎಂ ಆಗಬೇಕು ಎಂದು ಹೇಳಿಲ್ಲ. ಸಿದ್ದರಾಮಯ್ಯ ಜೊತೆ ಡಿಕೆ ಶಿವಕುಮಾರ್ ಸಹ ಸಿಎಂ ರೇಸ್ ನಲ್ಲಿದ್ದರು. ಸಿಎಂ ಬಗ್ಗೆ ಹೈಕಮಂಡ್ ತೀರ್ಮಾನ ಅಂತಿಮ. ಬಾಲಕೃಷ್ಣ ಹೇಳಿಕೆ ಬಗ್ಗೆ  ವಿಶ್ಲೇಷಣೆ ಅಗತ್ಯವಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದು ಸಿಎಂ ಹೇಳಿದ್ದಾರೆ ಎಂದರು.

ಸಚಿವರು ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಸಿ ಸುಧಾಕರ್,  ಯಾವ ವಿಚಾರಕ್ಕೆ ದೆಹಲಿಗೆ ಬರುತ್ತಾರೆ ಅಂತಾ ಗೊತ್ತಿಲ್ಲ. ಕೆಲವು ಸಚಿವರು ವೈಯಕ್ತಿಕ ಕಾರಣಕ್ಕೂ ಬರಬಹುದು ಎಂದರು.

Key words:  CM, High command, decision, final, Minister, M.C. Sudhakar