ಬೆಂಗಳೂರು,ಫೆಬ್ರವರಿ,4,2025 (www.justkannada.in): ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ಡಿ.ಕೆ ಸುರೇಶ್, ಅದು ಕೇವಲ ಪಾಸಿಂಗ್ ಸ್ಟೇಟಮೆಂಟ್ ಅಷ್ಟೆ ಎಂದಿದ್ದಾರೆ.
ಇಂದು ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಂಸದ ಡಿಕೆ ಸುರೇಶ್, ‘ಬಾಲಕೃಷ್ಣ ಸ್ವಾಗತ ಮಾಡುವಾಗ ಹೇಳಿದ್ದಾರೆ ಅಷ್ಟೇ. ಕೆಲವರು ಒಬ್ಬ ವ್ಯಕ್ತಿಯನ್ನು ಮೇಲೆ ಹತ್ತಿಸಬೇಕು ಅಂತ ಹೇಳುತ್ತಾರೆ. ಮಂತ್ರಿ ಆಗಬೇಕು ಅಂತಾರೆ ಅಥವಾ ಸಿಎಂ ಆಗಬೇಕು ಅಂತಾರೆ. ಆದರೆ ಬಾಲಕೃಷ್ಣ ಹೇಳಿಕೆಯಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಅದೊಂದು ಕೇವಲ ಪಾಸಿಂಗ್ ಸ್ಟೇಟಮೆಂಟ್ ಅಷ್ಟೇ. ಇದರ ಹಿಂದೆ ಬೇರೆ ಉದ್ದೇಶ ಇಲ್ಲ ಎಂದು ತಿಳಿಸಿದರು.
ಕಳೆದ ಭಾನುವಾರ ಚನ್ನಪಟ್ಟಣದಲ್ಲಿ ನಡೆದಿದ್ದ ಮತದಾನರಿಗೆ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ್ದ ಮಾಗಡಿ ಶಾಸಕ ಬಾಲಕೃಷ್ಣ ಅವರು, ಡಿಕೆ ಶಿವಕುಮಾರ್ ಮುಂದೆ ಸಿಎಂ ಆಗುತ್ತಾರೆ ಎಂದು ಹೇಳಿದ್ದರು.
Key words: MLA, Balakrishna, statement, DK Suresh