ಬೆಂಗಳೂರು,ಫೆಬ್ರವರಿ,4,2025 (www.justkannada.in): ನವೆಂಬರ್ ನಲ್ಲಿ ಸಿಎಂ ಬದಲಾಗುತ್ತಾರೆ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ವಿಪಕ್ಷ ನಾಯಕ ಆರ್.ಅಶೋಕ್ ಮೊದಲು ತಮ್ಮ ಕುರ್ಚಿ ನೋಡಿ ಕೊಳ್ಳಲಿ. ಮುಂದೆ ಏನಾಗುತ್ತೆ ಎಂದು ಅಶೋಕ್ ಅವರಿಗೆ ಗೊತ್ತಿಲ್ಲ ಅವರೇ ವಿರೋಧ ಪಕ್ಷದ ನಾಯಕರಾಗಿ ಇರುತ್ತಾರೋ..? ಇಲ್ವೋ..? ಸುಮ್ಮನೆ ಯಾಕೆ ಭವಿಷ್ಯವಾಣಿ ನುಡಿಯುತ್ತಾರೆ. ಅಶೋಕ್ ಅವರೇ ಜನರ ಮುಂದೆ ನಗೆಪಾಟಲೀಗೀಡಾಗಬೇಡಿ ಎಂದು ಕುಟುಕಿದರು.
ಮುಂದಿನ ಸಿಎಂ ಡಿಕೆಶಿ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಸಿಎಂ ಬದಲಾವಣೆ ಬಗ್ಗೆ ಯಾರು ಚರ್ಚೆ ಮಾಡಬಾರದು. ಈ ಬಗ್ಗೆ ಚರ್ಚೆ ಮಾಡದಂತೆ ಹೈಕಮಾಂಡ್ ಹೇಳಿದೆ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಸಿಎಂ ಒಳ್ಳೇ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲಾ ಸಿಎಂ ಜತೆ ಇದ್ದೇವೆ. ಇದನ್ನು ನಿಲ್ಲಿಸಬೇಕು ಅಂತಾ ಮನವಿ ಮಾಡುತ್ತೇವೆ ಎಂದು ಹೇಳಿದರು.
Key words: R. Ashok, chair, Minister, Dinesh Gundurao