ಮಾಹಿತಿ ಆಯೋಗ ಆಯುಕ್ತರ ಪ್ರಮಾಣ ವಚನ ಸಮಾರಂಭಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು,ಫೆಬ್ರವರಿ,4,2025 (www.justkannada.in) ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಆಯುಕ್ತರ ನೇಮಕ ಹಾಗೂ ಆಯುಕ್ತರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಮಾಹಿತಿ ಆಯೋಗಕ್ಕೆ ಆಯುಕ್ತರ ನೇಮಕ ಪ್ರಶ್ನಿಸಿ ಕೆ. ಮಲ್ಲಿಕಾರ್ಜುನ ರಾಜು ಎಂಬುವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.  ಈ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇಂದಿನ ಪ್ರಮಾಣ ವಚನ ಸಮಾರಂಭಕ್ಕೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೆ ದಾಖಲೆ ಪರಿಶೀಲನೆ ನಂತರ ಮಧ್ಯಂತರ ಆದೇಶದ ಬಗ್ಗೆ ತೀರ್ಮಾನ ಮಾಡಲಾಗುವುದು.  ಇಂದಿನ ಅಧಿಕಾರ ಸ್ವೀಕಾರ ಹೈಕೋರ್ಟ್ ನೀಡುವ ಆದೇಶಕ್ಕೆ ಒಳಪಡುತ್ತದೆ ಎಂದು  ನ್ಯಾ.ಆರ್.ದೇವದಾಸ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ  ವಕೀಲರು, ಮಾಹಿತಿ ಆಯೋಗ ಆಯುಕ್ತರ ನೇಮಕ ಸಂಬಂಧ  ಶೋಧನಾ ಸಮಿತಿ ಅರ್ಹರ  ಆಯ್ಕೆ ಪಟ್ಟಿ ತಯಾರಿಸಬೇಕು. ಶೋಧನಾ ಸಮಿತಿ ಶಿಫಾರಸ್ಸು ಆಧರಿಸಿ ಮಾಹಿತಿ ಆಯೋಗ ಆಯುಕ್ತರ ನೇಮಕವಾಗಬೇಕು. ಆದರೆ ಸುಪ್ರೀಂಕೋರ್ಟ್ ನಿರ್ದೇಶನ ಉಲ್ಲಂಘಿಸಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿದರು.

ಅರ್ಜಿದಾರರ ಪರ ವಕೀಲರ ಆರೋಪ‌ ನಿರಾಕರಿಸಿ ವಾದ ಮಂಡಿಸಿದ ಎಜಿ ಶಶಿಕಿರಣ್ ಶೆಟ್ಟಿ, ಸುಪ್ರೀಂ ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸುತ್ತಿದೆ. ಇಂದಿನ‌ ಸಮಾರಂಭಕ್ಕೆ ತಡೆ ನೀಡಬಾರದೆಂದು ವಾದಿಸಿದ್ದರು.

Key words: High Court, refuses, stay,  Information Commission, Commissioner