ಜಾಗತಿಕ ಹೂಡಿಕೆದಾರರ ಸಮಾವೇಶ: ಫೆ.13ರಂದು `ಕ್ವಿನ್ ಸಿಟಿ ಕುರಿತು ರೌಂಡ್‌ ಟೇಬಲ್‌’ ಚರ್ಚೆ

ಸಚಿವರಾದ ಡಾ.ಎಂ.ಸಿ.ಸುಧಾಕರ್, ಡಾ. ಶರಣ ಪ್ರಕಾಶ ಪಾಟೀಲ ಗೋಷ್ಠಿಯ ನೇತೃತ್ವ*

*5-6 ವಿದೇಶಿ ವಿವಿ ಜತೆ ಒಡಂಬಡಿಕೆ, ಪ್ರತಿಷ್ಠಿತ ವಿ.ವಿ.ಗಳು, ಪ್ರತಿಷ್ಠಾನಗಳು ಭಾಗಿ: ಎಂ ಬಿ ಪಾಟೀಲ*

ಬೆಂಗಳೂರು, ಫೆ.04, 2025 (www.justkannada.in):ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ದೇಶ- ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಹೆಸರಾಂತ ಉದ್ಯಮಗಳ ಪ್ರತಿಷ್ಠಾನಗಳೊಂದಿಗೆ ಉದ್ದೇಶಿತ `ಕ್ವಿನ್ ಸಿಟಿ’ಯಲ್ಲಿ ಅತ್ಯುತ್ಕೃಷ್ಟ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳ ಕ್ಷೇತ್ರದಲ್ಲಿ ಸಹಭಾಗಿತ್ವದ ಮೂಲಕ ದಕ್ಷ ಕಾರ್ಯ ಪರಿಸರ ಸೃಷ್ಟಿಸುವ ಕುರಿತು ಪ್ರತ್ಯೇಕ ರೌಂಡ್‌ ಟೇಬಲ್‌ ಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು, `ಸಮಾವೇಶದ ಎರಡನೆಯ ದಿನವಾದ ಫೆ,13ರಂದು ಈ ಗೋಷ್ಠಿ ನಡೆಯಲಿದೆ. ಈ ಸಂದರ್ಭದಲ್ಲಿ ವಿದೇಶಗಳ 5-6 ಮತ್ತು ಭಾರತದ 7-8 ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಸಾಧ್ಯತೆ ಕೂಡ ಇದೆ. ಈ ಸಂಬಂಧ ಮಾತುಕತೆ ಪ್ರಗತಿಯಲ್ಲಿದ್ದು, ಯಾವ ವಿ.ವಿ.ಗಳೊಂದಿಗೆ ಒಡಂಬಡಿಕೆ ಆಗಲಿದೆ ಎನ್ನುವುದನ್ನು ನಂತರದ ದಿನಗಳಲ್ಲಿ ಅಂತಿಮವಾಗಲಿದೆ. ಯುಜಿಸಿ ನಿಯಮಗಳ ಪ್ರಕಾರ, ಜಗತ್ತಿನ ಮೊದಲ 500 ಸ್ಥಾನಗಳಲ್ಲಿರುವ ವಿ.ವಿ.ಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ಸನ್ನು ತೆರೆಯಲು ಅವಕಾಶವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು’ ಎಂದಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕೈಗಾರಿಕೋದ್ಯಮಗಳಲ್ಲಿನ ಹೂಡಿಕೆ ಬಗ್ಗೆ ಮಾತ್ರ ಗಮನವಿರುವುದಿಲ್ಲ. ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಯೂ ಸೇರಿದಂತೆ ಸಂಶೋಧನೆ ಮತ್ತು ಅದಕ್ಕೆ ಪೂರಕವಾಗಿರುವ ವಲಯಗಳಿಗೂ ಆದ್ಯತೆ ಇರಲಿದೆ. ಏಕೆಂದರೆ, ಕ್ವಿನ್ ಸಿಟಿ ಯೋಜನೆಯು ಭವಿಷ್ಯದ ನಗರಾಭಿವೃದ್ಧಿಯ ಪರಿಕಲ್ಪನೆ ಮತ್ತು ಜಾಗತಿಕ ಗುಣಮಟ್ಟದ ಉದ್ಯಮಶೀಲತೆ, ಕೌಶಲ ಮುಂತಾದವನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

ಒಂದೂವರೆ ಗಂಟೆ ಕಾಲದ ಈ ಗೋಷ್ಠಿಯಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಜೀಂ ಪ್ರೇಂಜಿ, ಪಿಇಎಸ್, ಎಂ ಎಸ್ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ, ದಯಾನಂದ ಸಾಗರ್, ಚಾಣಕ್ಯ, ಸೆಂಟ್ ಜೋಸೆಫ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಅಮಿಟಿ, ಬಿಎಲ್ ಡಿಇ, ಕ್ರೈಸ್ಟ್, ಜೈನ್, ಕೆಎಲ್ಇ ಸೇರಿದಂತೆ ಇನ್ನೂ ಅನೇಕ ಪರಿಷ್ಟಿತ ವಿಶ್ವವಿದ್ಯಾಲಯಗಳಿಗೆ ಆಹ್ವಾನ ನೀಡಲಾಗಿದೆ. ಜತೆಗೆ ಐಐಎಸ್ಸಿ, ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ನಿಮ್ಹಾನ್ಸ್, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ನ್ಯೂಯಾರ್ಕಿನ ಸೆಂಟ್ ಜಾನ್ ಯೂನಿವರ್ಸಿಟಿ, ಇಂಗ್ಲೆಂಡಿನ ಯೂನಿವರ್ಸಿಟಿ ಆಫ್ ಯಾರ್ಕ್, ವೆಲ್ಲೂರಿನ ವಿಐಟಿ ಮತ್ತು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ಪಿಲಾನಿಯ ಬಿರ್ಲಾ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆ (ಬಿಟ್ಸ್), ಶಾಸ್ತ್ರ ಯೂನಿವರ್ಸಿಟಿ ಮತ್ತು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಗಳ ಪರಿಣತರೂ ಭಾಗವಹಿಸಲು ವಿಶ್ವಾಸ ಇದೆ ಎಂದು ಅವರು ನುಡಿದಿದ್ದಾರೆ.

ಮಿಗಿಲಾಗಿ ಅಜೀಂ ಪ್ರೇಂಜಿ, ಇನ್ಫೋಸಿಸ್, ರಿಲಯನ್ಸ್, ಅದಾನಿ, ಭಾರತಿ, ವಿಪ್ರೋ, ಬಯೋಕಾನ್, ಕೊಟಕ್ ಎಜುಕೇಶನ್, ಶಿವ ನಾಡಾರ್, ಬಜಾಜ್ ಮತ್ತು ಮಹೀಂದ್ರ ಪ್ರತಿಷ್ಠಾನಗಳು, ಟಾಟಾ ಟ್ರಸ್ಟ್, ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್, ಆದಿತ್ಯ ಬಿರ್ಲಾ ಗ್ರೂಪ್ ಸಿಎಸ್ಆರ್ ಹಾಗೂ ಏಷ್ಯನ್ ಪೇಂಟ್ಸ್ ಸಿಎಸ್ಆರ್ ಸಂಸ್ಥೆಗಳ ಉನ್ನತ ಮಟ್ಟದ ಪ್ರತಿನಿಧಿಗಳು ಕೂಡ ಇದರಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದು ಪಾಟೀಲ ವಿವರಿಸಿದ್ದಾರೆ.
ದೊಡ್ಡಬಳ್ಳಾಪುರ- ದಾಬಸ್‌ಪೇಟೆ ಮಧ್ಯೆ ಸುಮಾರು 5000 ಎಕರೆ ಪ್ರದೇಶದಲ್ಲಿ ಕ್ವಿನ್‌ ಸಿಟಿ ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಶಿಕ್ಷಣ, ಆರೋಗ್ಯ, ಸಂಶೋಧನೆ ಮತ್ತು ನಾವೀನ್ಯತೆ ಕುರಿತಾದ ಪ್ರತಿಷ್ಠಿತ ಸಂಸ್ಥೆಗಳು ತಲೆ ಎತ್ತಲಿವೆ.

English Summary:

*GIM Invest Karnataka 25: Exclusive Roundtable on KWIN-City Project*

*Dr. MC Sudhakar and Dr. Sharana Prakash Patil to Preside Over the Session*

*MoUs with renowned foreign and Indian universities expected, Says MB Patil*

Bengaluru: Large and Medium Industries Minister M.B. Patil announced on Tuesday that an exclusive roundtable session on the Karnataka government’s ambitious KWIN-City project will be held during GIM Invest Karnataka 2025. This session, featuring participation from renowned Indian and international universities, as well as leading institutions, aims to foster collaborations in education, research, and innovation.

Scheduled for February 13, the session is expected to witness the signing of MoUs with 5-6 foreign universities and 6-8 Indian universities. Discussions are currently ongoing, and final decisions will be taken in the coming days. Highlighting the significance of this initiative, Patil noted that under UGC norms, the world’s top 500 universities are permitted to establish campuses in India, and Karnataka will actively leverage this opportunity.

The upcoming Global Investors Meet (GIM) will not focus solely on industrial investments but will also prioritise research, skill development, and ancillary sectors aimed at creating a highly skilled workforce. Patil emphasised that KWIN-City represents a futuristic urban development model aligned with global standards in entrepreneurship, skills, and innovation.

The one-and-a-half-hour roundtable will see participation from key state government figures, including Higher Education Minister Dr. M.C. Sudhakar, Medical Education Minister Dr. Sharan Prakash Patil, and other senior officials.

Several leading Indian universities and institutions, such as Azim Premji University, PES University, MS Ramaiah University of Applied Sciences, Dayananda Sagar University, Chanakya University, St. Joseph’s University, Manipal Academy of Higher Education, Amity University, BLDE University, Christ University, Jain University, and KLE University, have been invited to the session.

Additionally, prestigious research institutions like IISc, Jawaharlal Nehru Centre for Advanced Scientific Research (JNCASR), NIMHANS, and the National Law School of India University (NLSIU) are expected to take part. International universities, including St. John’s University (New York) and the University of York (England), along with experts from VIT Vellore, Christian Medical College (CMC), Birla Institute of Technology and Science (BITS) Pilani, Sastra University, and Lovely Professional University (LPU), are also anticipated to participate.

Prominent Indian corporate leaders and foundations, such as Azim Premji Foundation, Infosys, Reliance, Adani, Bharti, Wipro, Biocon, Kotak Education Foundation, Shiv Nadar Foundation, Bajaj and Mahindra Foundations, Tata Trusts, and HDFC, will also be part of the discussions. Representatives from Bank Parivarthan, Aditya Birla Group CSR, and Asian Paints CSR will present their ideas on collaboration and investment in research and education.

The KWIN-City project will be developed on approximately 5,000 acres between Doddaballapur and Dabaspet. It aims to establish a hub for education, healthcare, research, and innovation, bringing together world-class institutions and industries to drive Karnataka’s growth in these sectors.