5 ವರ್ಷಗಳ ಬಳಿಕ ರೆಪೋದರ ಇಳಿಸಿದ RBI

ನವದೆಹಲಿ, ಫೆಬ್ರುವರಿ 7,2025 (www.justkannada.in): ಐದು ವರ್ಷಗಳ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೋ ದರವನ್ನ ಇಳಿಕೆ ಮಾಡಿದೆ.

ಶೇ. 6.50ರಷ್ಟಿದ್ದ ಬಡ್ಡಿದರವನ್ನು ಶೇ. 6.25ಕ್ಕೆ ಇಳಿಸುವುದಾಗಿ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಘೋಷಣೆ ಮಾಡಿದ್ದಾರೆ.  ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ ರೆಪೋದರವನ್ನು 0.25 ಪ್ರತಿಶತದಷ್ಟು ಇಳಿಕೆ ಮಾಡುವ ನಿರ್ಧಾರ ಕೈಗೊಂಡಿದೆ.

ಮೊನ್ನೆಯಿಂದ ನಡೆದಿದ್ದ ಎಂಪಿಸಿ ಸಭೆಯ ಬಳಿಕ ಇಂದು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಆರ್​ಬಿಐನ ರಿಪೋ ದರ ಇಳಿಕೆ ಆಗಿದೆ. ಎಂಪಿಸಿಯಲ್ಲಿರುವ ಎಲ್ಲಾ ಆರು ಸದಸ್ಯರು ಸರ್ವಾನುಮತದಿಂದ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲು ನಿರ್ಧರಿಸಿದ್ದಾರೆ. ಈ ರಿಪೋ ದರ ಇಳಿಕೆಯಿಂದ ಬ್ಯಾಂಕುಗಳ ಸಾಲದರಗಳು ಕಡಿಮೆಗೊಳ್ಳುವ ಸಾಧ್ಯತೆ ಇದೆ.

Key words: RBI, Decrease, repo rate,