ಬೆಂಗಳೂರು,ಫೆಬ್ರವರಿ,7,025 (www.justkannada.in): ಮುಡಾ ಹಗರಣವನ್ನ ಸಿಬಿಐ ತನಿಖೆಗೆ ನೀಡುವುದಕ್ಕೆ ಹೈಕೋರ್ಟ್ ನಿರಾಕರಿಸಿದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮುಡಾ ಪ್ರಕರಣವನ್ನ ಯಾಕೆ ಸಿಬಿಐಗೆ ಕೊಡ್ತಾರೆ. ಈಗಾಗಲೇ ಪ್ರಕರಣವನ್ನ ಎರಡು ಏಜೆನ್ಸಿ ತನಿಖೆ ಮಾಡುತ್ತಿವೆ . 3ನೇ ಏಜೆನ್ಸಿಗೆ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದರು.
ಈಗಾಗಲೇ ನಾನು ಹೊಡೆದಾಡುತ್ತಿದ್ದೇನೆ. ನನ್ನ ಮೇಲೆ ಹಾಕಿರುವ ಕೇಸ್ ಸರಿ ಇಲ್ಲ ಹೀಗಂತ ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮಾಡುತ್ತಿದ್ದೇನೆ. ಎರಡರಿಂದ ಮೂರು ಏಜೆನ್ಸಿಗಳು ಒಟ್ಟಿಗೆ ತನಿಖೆ ಮಾಡೋದು ಸರಿಯಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: High Court, Muda case, CBI, DCM, DK Shivakumar