ಮೈಸೂರು, ಫೆ.೦೭, ೨೦೨೫: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ತೇಜೋವಧೆ ಮಾಡಬೇಕು. ಮುಡಾ ಪ್ರಕರಣದಲ್ಲಿ ಅವರನ್ನ ಸಿಲುಕಿಸಲು ಬಿಜೆಪಿ, ಜೆಡಿಎಸ್ ನಾಯಕರು ಮುಂದಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳಲ್ಲಿ ಸತ್ಯಕ್ಕೆ ಜಯ ಸಿಗುತ್ತೆ ಎಂಬ ನಂಬಿಕೆ ಇತ್ತು. ಈಗ ಅದು ನಿಜವಾಗಿದೆ. ಸತ್ಯ ಯಾವತ್ತೂ ಜಯಿಸುತ್ತದೆ ಎನ್ನುವುದಕ್ಕೆ ನ್ಯಾಯಾಲಯದ ತೀರ್ಪೆ ಸಾಕ್ಷಿ. ನಾವು ಇದನ್ನ ಎಕ್ಸೆಪೆಕ್ಟ್ ಮಾಡಿದ್ವಿ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ಎಂ.ಲಕ್ಷ್ಮಣ್ ಹೇಳಿದಿಷ್ಟು…
ಈ ಪ್ರಕರಣದಲ್ಲಿ ಸಿಎಂ ಹಸ್ತಕ್ಷೇಪ ಇಲ್ಲ ಎಂಬುದು ನಮಗೆ ಗೊತ್ತಿತ್ತು. ನಮ್ಮ ಸೈಟ್ ಕಿತ್ತುಕೊಂಡು ನಮಗೆ ಮೋಸ ಮಾಡುವ ಕೆಲಸ ಆಗಿತ್ತು. ಬ್ರೋಕರ್ ಮೂಲಕ ಸೈಟ್ ಕಿತ್ತುಕೊಳ್ಳಲು ಮುಂದಾಗಿದ್ರು. ಎಂದು ಹೇಳುವ ಮೂಲಕ , ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣರನ್ನ ಪರೋಕ್ಷವಾಗಿ ಬ್ರೋಕರ್ ಗೆ ಹೋಲಿಸಿದ ಎಂ ಲಕ್ಷ್ಮಣ್.
ಸರ್ಕಾರ ಬೀಳಿಸಬೇಕು, ಸಿದ್ದರಾಮಯ್ಯರನ್ನ ಕೆಳಗಿಳಿಸುವುದೇ ಇವರ ಹಿಡನ್ ಅಜೆಂಡಾ. ಸ್ನೇಹಮಯಿ ಕೃಷ್ಣ ಕೂಲಿಗಾಗಿ ಕೆಲಸ ಮಾಡ್ತಿದ್ದಾರೆ. ಅವರಿಗೆ ಒಂದಿಷ್ಟು ಹಣ ಕೊಟ್ಟಿರ್ತಾರೆ. ಒಂದು ತನಿಖಾ ಸಂಸ್ಥೆಗೆ ಪ್ರಭಾವ ಬೀರಲಿಕ್ಕೆ ಇಡಿ ಮುಂದಾಗಿದೆ. ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವುದು ಇಡಿ ಉದ್ದೇಶ. ಇಡಿ ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದರೆ ಇಲ್ಲಿಗೆ ತನಿಖೆ ಸ್ಥಗಿತಗೊಳಿಸಬೇಕು.
ಸ್ನೇಹಮಯಿ ಕೃಷ್ಣ ಮೇಲ್ ಮಾಡಿದ ತಕ್ಷಣ ಎಫ್ಐಆರ್ ಮಾಡಲಾಗುತ್ತದೆ. ಒಂದು ತನಿಖಾ ಸಂಸ್ಥೆ ತನಿಖೆ ಮಾಡುವಾಗ ಮತ್ತೊಂದು ತನಿಖಾ ಸಂಸ್ಥೆ ತನಿಖೆ ಮಾಡುವಂತಿಲ್ಲ. ಯಾವ ಕಾನೂನಿನಲ್ಲು ಇದಕ್ಕೆ ಅವಕಾಶ ಇಲ್ಲ. ಹೈಕೋರ್ಟ್ ನಲ್ಲಿ ದೊಡ್ಡ ದೊಡ್ಡ ವಕೀಲರನ್ನ ಕರೆ ತಂದು ವಾದ ಮಾಡ್ತಿಸ್ತೀರಾ. ಅವರಿಗೆ ಫೀಸ್ ಕೊಡಲು ದುಡ್ಡು ಎಲ್ಲಿಂದ ಬಂತು ಹೇಳಿ.
ಮುಂದಿನ ದಿನಗಳಲ್ಲಿ ಅವರು ಸುಪ್ರೀಂ ಕೋರ್ಟ್ ಗೆ ಹೋಗ್ತಾರೆ ಅಲ್ಲಿಯೂ ನಾವು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಅಸ್ಥಿರಗೊಳಿಸಲಿಕ್ಕೆ ಮುಂದಾಗ್ತಿದೆ. ಇದು ಕರ್ನಾಟಕ ರಾಜ್ಯ, ಇಲ್ಲಿ ಕೇಂದ್ರ ಆಟ ನಡೆಯೋಲ್ಲ.
ರಾಜ್ಯ ಸರ್ಕಾರಕ್ಕೆ ಅನುದಾನ ತರುವಂತ ನಿಟ್ಟಿನಲ್ಲಿ ಬಿಜೆಪಿ, ಜೆಡಿಎಸ್ ಸಂಸದರು ಮುಂದಾಗಲಿ. ಜನರಿಗೆ ಒಳ್ಳೆಯ ಕೆಲಸ ಮಾಡಲು ಕೈ ಜೋಡಿಸಿ. ಸಿದ್ದರಾಮಯ್ಯರನ್ನ ತೆಗೀಬೇಕು ಅನ್ನೋ ಕೆಲಸ ಬಿಡಿ. ಅಮೇರಿಕದಿಂದ ಭಾರತೀಯರಿಗೆ ಬೇಡಿ ಹಾಕಿ ಕರೆ ತರಲಾಗುತ್ತಿದೆ. ಭಾರತೀಯರನ್ನ ಕಾಪಾಡುವ ಕೆಲಸ ಮಾಡಿ. ಕೇಂದ್ರ ಸರ್ಕಾರ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಕಿಡಿ.
ಪ್ರಾಧಿಕಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನ ಸ್ವತಃ ಸಿಎಂ ತೆಗೆದುಕೊಂಡಿದ್ರು ಎಂದು ಬಿಂಬಿತ ಮಾಡಲಿಕ್ಕೆ ಮುಂದಾಗಿದ್ರು. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ರು. ಈಗ ನ್ಯಾಯಾಲಯದ ತೀರ್ಪು ಬಂದಿದೆ. ಬಿಜೆಪಿ ಜೆಡಿಎಸ್ ನಾಯಕರು ನ್ಯಾಯಾಲಯದ ತೀರ್ಪಿನ ಬಳಿಕ. ಪಶ್ಚತ್ತಾಪಕ್ಕಾಗಿ ಬೆಂಗಳೂರಿನಿಂದ ತಿರುಪತಿವರೆಗೆ ಪಾದಯಾತ್ರೆ ಮಾಡಬೇಕು. ಸಿದ್ದರಾಮಯ್ಯ ಮೇಲೆ ಆರೋಪ ಮಾಡಲಿಕ್ಕೆ ಮುಂದಾಗಿದ್ರಿ. ರಾಜ್ಯದ ಜನತೆ ಇದನ್ನ ಸಹಿಸಲ್ಲ.
KEY WORDS; BJP-JD(S) leaders, destabilise,’broker’, humiliated, court verdict, M.Lakshmana.
SUMMARY:
BJP-JD(S) leaders who tried to destabilise govt through ‘broker’ will be humiliated by court verdict: M Lakshmanan
We knew that there was no interference from the CM in the case. It was a job to grab our site and cheat us. They tried to take over the site through a broker. M Lakshman indirectly compared RTI activist Snehamayi Krishna to a broker.