ಮೈಸೂರು, ಫೆ.೦೭, ೨೦೨೫: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಡದಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ೧೪ ನಿವೇಶ ಹಂಚಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ಸಿದ್ದರಾಮಯ್ಯನ ಹುಂಡಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರ ಪರ ತೀರ್ಪು ಬರುತ್ತೆ ಅಂತಾ ನಮಗೆ ಮೊದಲೆ ಗೊತ್ತಿತ್ತು. ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ವಿರುದ್ದ ಷಡ್ಯಂತ್ರ ಮಾಡ್ತಿದ್ದಾರೆ. ಏನೇ ಕುತಂತ್ರ ಮಾಡಿದ್ರು ಸಿದ್ದರಾಮಯ್ಯ ಬಗ್ಗಲ್ಲ ಜಗ್ಗಲ್ಲ. ಸಿಎಂ ಯಾವುದೇ ತಪ್ಪನ್ನೂ ಮಾಡಿಲ್ಲ.
ಸ್ನೇಹಮಯಿ ಕೃಷ್ಣ ದೂರು ನೀಡಲು ಕುಮಾರಸ್ವಾಮಿಯೇ ಕಾರಣ. ಹಿಂದುಳಿದ ವರ್ಗದ ನಾಯಕ ಎರಡು ಬಾರಿ ಸಿಎಂ ಆದ್ರು ಅಂತಾ ವಿರೋಧಿಗಳಿಗೆ ಹೊಟ್ಟೆ ಉರಿ. ಏನೆ ಮಾಡಿದ್ರು ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ವಿಶ್ವಾಸವಿದೆ. ಸಿಎಂ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಹೇಳಿಕೆ.
ಸಿದ್ದರಾಮಯ್ಯರವರು ಯಾವುದೇ ತಪ್ಪನ್ನ ಮಾಡಿಲ್ಲ. ಇವತ್ತಿನ ಹೈಕೋರ್ಟ್ ತೀರ್ಪು ನಮಗೆ ಖುಷಿ ತಂದಿದೆ. ದೊಡ್ಡಪ್ಪ ಸಿಎಂ ಆದರೂ ನಾವು ಎಂದು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಎರಡು ಬಾರಿ ಸಿಎಂ ಆದ್ರು ಎಂದು ಬಿಜೆಪಿ-ಜೆಡಿಎಸ್ ಷಡ್ಯಂತ್ರ ಮಾಡ್ತಿದೆ. ಆದ್ರೆ ಆ ಷಡ್ಯಂತ್ರ, ಕುತಂತ್ರಕ್ಕೆ ಸಿದ್ದರಾಮಯ್ಯರವರು ಬಗ್ಗಲ್ಲ. ಎಲ್ಲ ಆರೋಪಗಳಿಂದ ಮುಕ್ತರಾಗಿ ಬರ್ತಾರೆ. ಸಿಎಂ ಸಿದ್ದರಾಮಯ್ಯರ ಸಹೋದರನ ಪುತ್ರ ರಘು ಹೇಳಿಕೆ.
KEY WORDS: Dharwad High Court, Big Relief, Siddaramaiah’s Hometown, “Dilkhush”
SUMMARY:
Dharwad High Court Big Relief: People of Cm Siddaramaiah’s Hometown “Dilkhush”
A day after the court dismissed a petition seeking a CBI probe against Siddaramaiah in connection with the allotment of 14 plots of land by the Mysuru Urban Development Authority (MUDA) to chief minister Siddaramaiah’s wife, the villagers of Siddaramana hundi expressed happiness.