ಬೆಂಗಳೂರು, ಫೆ.೦೭, ೨೦೨೫ : ಐಪಿಎಸ್ ಅಧಿಕಾರಿ ರೂಪಾ ಮುದ್ಗಿಲ್ ಅವರ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ಫೆ. ೧೨ ಕ್ಕೆ ಮುಂದೂಡಿದೆ.
ಇದೇ ಫೆ. ೫ ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಜಯ್ ಕುಮಾರ್ ಜಾಟ್ಲಾ ಅವರು ‘ಪರಸ್ಪರ ದ್ವೇಷ ಮರೆತು ರಾಜಿ ಮಾಡಿಕೊಳ್ಳಿ’ ಎಂದು ಈ ಇಬ್ಬರು ಅಧಿಕಾರಿಗಳಿಗೆ ಹೇಳುತ್ತಾ, ‘ಒನ್ ಮಿನಿಟ್ ಅಪಾಲಜಿ’ ಎಂಬ ಪುಸ್ತಕ ಓದಲು ಸಲಹೆ ನೀಡಿದ್ದಾರೆ.
ರೋಹಿಣಿ ಸಿಂಧೂರಿ ಅವರು, ರೂಪಾ ಮುದ್ಗಿಲ್ ಅವರಿಂದ ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಕೋರಿದರು.ಆದರೆ, ರೂಪ ಅವರು ಇದಕ್ಕೆ ಸಹಮತ ವ್ಯಕ್ತಪಡಿಸದ ಕಾರಣ, ಪ್ರಕರಣ ಮುಂದುವರೆದಿದ್ದು, ಫೆ. ೧೨ ಕ್ಕೆ ಮುಂದೂಡಲಾಗಿದೆ.
ಘಟನೆ ಹಿನ್ನೆಲೆ:
ಐ.ಎ.ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐ.ಪಿ.ಎಸ್. ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರ ನಡುವಿನ ಮಾನನಷ್ಟ ಪ್ರಕರಣ…
- ಮಾರ್ಚ್ 2023: ರೋಹಿಣಿ ಸಿಂಧೂರಿ, ಡಿ. ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಈ ಮೊಕದ್ದಮೆಯಲ್ಲಿ, ರೂಪಾ ಅವರ ಫೇಸ್ಬುಕ್ ಪೋಸ್ಟ್ಗಳು ಮತ್ತು ಮಾಧ್ಯಮಗಳಲ್ಲಿ ರೋಹಿಣಿ ಅವರ ಬಗ್ಗೆ ಮಾಡಿದ ಆರೋಪಗಳನ್ನು ಮಾನಹಾನಿಕರ ಎಂದು ಆರೋಪಿಸಿ, ಒಂದು ಕೋಟಿ ರೂಪಾಯಿ ಪರಿಹಾರವನ್ನು ಕೋರಿ ದೂರಿದರು.
- ಆಗಸ್ಟ್ 2023: ಕರ್ನಾಟಕ ಹೈಕೋರ್ಟ್, ಡಿ. ರೂಪಾ ಸಲ್ಲಿಸಿದ ಮೊಕದ್ದಮೆ ರದ್ದುಗೊಳಿಸುವ ಅರ್ಜಿಯನ್ನು ನಿರಾಕರಿಸಿತು. ಈ ಮೂಲಕ, ಮೊಕದ್ದಮೆ ಮುಂದುವರಿಯುವಂತೆ ಆದೇಶಿಸಿತು.
- ಡಿಸೆಂಬರ್ 2023: ಸುಪ್ರೀಂ ಕೋರ್ಟ್, ಡಿ. ರೂಪಾ ಸಲ್ಲಿಸಿದ ಮೊಕದ್ದಮೆ ರದ್ದುಗೊಳಿಸುವ ಅರ್ಜಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಿತು. ನ್ಯಾಯಮೂರ್ತಿಗಳು, ಇಬ್ಬರ ನಡುವಿನ ಸಂಘರ್ಷವನ್ನು ನಿವಾರಿಸಲು ಮಧ್ಯಸ್ಥಿಕೆಗೆ ಸೂಚಿಸಿದರು.
- ಫೆಬ್ರವರಿ 2025: ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ, ರೂಪಾ ಅವರು ರೋಹಿಣಿ ಅವರ ವಿರುದ್ಧ ಸಲ್ಲಿಸಿದ ಮೊಕದ್ದಮೆ ರದ್ದುಗೊಳಿಸುವ ಅರ್ಜಿಯನ್ನು ಹಿಂಪಡೆದರು. ರೋಹಿಣಿ ಅವರು, ರೂಪಾ ಅವರಿಂದ ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಕೋರಿದರು.
ಈ ಮೂಲಕ, ರೋಹಿಣಿ ಸಿಂಧೂರಿ ಮತ್ತು ಡಿ. ರೂಪಾ ಮೌದ್ಗಿಲ್ ಅವರ ನಡುವಿನ ಮಾನನಷ್ಟ ಪ್ರಕರಣವು ನ್ಯಾಯಾಲಯದಲ್ಲಿ ಮುಂದುವರಿಯುತ್ತಿದೆ, ಮತ್ತು ಇಬ್ಬರ ನಡುವಿನ ಸಂಬಂಧ ಸುಧಾರಿಸಲು ಪ್ರಯತ್ನಗಳು ನಡೆಯುತ್ತಿವೆ.
key words: IAS Rohini, IPS Roopa, court advises, ‘One Minute Apology’
SUMMARY:
Rohini V/S Roopa: The court advises to read ‘One Minute Apology’ and adjourned the hearing to February 12.
The court was hearing a defamation case filed by IAS officer Rohini Sindhuri against IPS officer Roopa Mudgil. Postponed to Feb.12.