ನವದೆಹಲಿ,ಫೆಬ್ರವರಿ,10,2025 (www.justkannada.in): ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದಾರೆ. ಬಿವೈ ವಿಜಯೇಂದ್ರ ಬದಲಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾಧ್ಯಕ್ಷ ಚುನಾವಣೆಗೂ ಮುನ್ನ ಬಿಜೆಪಿ ಹಿರಿಯ ನಾಯಕರು ಸಭೆ ನಡೆಸುತ್ತಾರೆ. ವಿಜಯೇಂದ್ರ ಬದಲಾಗ್ತಾರೆ ಎಂಬುವ ವಿಶ್ವಾಸ ನಮಗಿದೆ. ಮೋದಿ, ಅಮಿತ್ ಶಾ ಸಂತೋಷ್ ಅವರ ಮೇಲೆ ನಂಬಿಕೆ ಇದೆ ಎಂದರು.
ಸೋಮಣ್ಣ ಆಹ್ವಾನದ ಮೇರೆಗೆ ದೆಹಲಿಗೆ ಬಂದಿದ್ದೇವೆ. ಸೋಮಣ್ಣ ಮನೆ ಪೂಜೆಗೆ ಬಂದಿದ್ದೇವೆ. ಎಲ್ಲರೂ ಬನ್ನಿ ಎಂದು ಆಹ್ವಾನ ನೀಡಿದ್ದರು. ಏನಾದರೂ ಚರ್ಚೆ ನಡೆದರೂ ನಡೆಯಬಹುದು. ಕಾರ್ಯಕ್ರಮಕ್ಕೆ ವಿಜಯೇಂದ್ರಗೆ ಆಹ್ವಾನ ನೀಡದ ಬಗ್ಗೆ ನಮಗೆ ಗೊತ್ತಿಲ್ಲ . ರಾಜ್ಯಾಧ್ಯಕ್ಷರು ಟೆನ್ಷನ್ ಆಗಿದ್ದರೋ ಇಲ್ಲವೋ ಗೊತ್ತಿಲ್ಲ ನಾವು ಮೆನ್ಷನ್ ಮಾಡೋಕೆ ಬಂದಿದ್ದೇವೆ. ಸೋಮಣ್ಣ ಮೂಲಕ ಸಂದೇಶ ನೀಡಲಾಗಿದೆ ಎಂದು ಯತ್ನಾಳ್ ತಿಳಿಸಿದರು.
Key words: High command, state president, MLA, Yatnal