ಮುಡಾ ಕೇಸ್ : ಇಡಿ ಸಮನ್ಸ್ ಕಾನೂನು ಬಾಹಿರ- ಭೈರತಿ ಸುರೇಶ್ ಪರ ವಕೀಲರಿಂದ ವಾದ

ಬೆಂಗಳೂರು,ಫೆಬ್ರವರಿ,10,2025 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಕೋರಿ ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ.

ಮುಡಾ ಪ್ರಕರಣ ಸಂಬಂಧ ಇಡಿ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.  ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು ಸಚಿವ ಭೈರತಿ ಸುರೇಶ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ.

ಮುಡಾದಲ್ಲಿ ಭೈರತಿ ತಿ ಸುರೇಶ್ ಯಾವುದೇ ಹುದ್ದೆ ವಹಿಸಿಕೊಂಡಿಲ್ಲ. ಭೈರತಿ ಸುರೇಶ್ ವಿರುದ್ದ ಯಾವುದೇ ಆರೋಪವಿಲ್ಲ.14 ಸೈಟ್ ಹಂಚಿಕೆಗೂ ಅವರಿಗೂ ಸಂಬಂಧವಿಲ್ಲ. ಭೈರತಿ ಸುರೇಶ್ ಅವರು ಮಂತ್ರಿ ಆಗಿದ್ದು 2023 ಜೂನ್ ನಲ್ಲಿ. ಹೀಗಾಗಿ ಇಡಿ ಸಮನ್ಸ್ ಕಾನೂನು ಬಾಹಿರ  ಎಂದು ವಾದಿಸಿದ್ದಾರೆ.

Key words: Muda case,  ED, summons, Bhairati Suresh, High court