ನವದೆಹಲಿ,ಫೆಭ್ರವರಿ,10,2025 (www.justkannada.in): ವೈಫಲ್ಯವನ್ನು ಹಿನ್ನಡೆ ಎಂದು ಭಾವಿಸದೇ ಅದನ್ನು ಚಲನೆಯ ಇಂಧನವಾಗಿ ನೋಡಿ ಎಂದು ವಿದ್ಯಾರ್ಥಿಗಳಿಗ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿದ್ಯಾರ್ಥಿಗಳೊಂದಿಗೆ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವನ್ನು ನಡೆಸಿ ಚರ್ಚಿಸಿದರು. ಮಕ್ಕಳಿಗೆ ಗಣಿತವನ್ನು ನಿಭಾಯಿಸುವ ತಂತ್ರಗಳ ಬಗ್ಗೆ ತಿಳಿಸಿದರು.
ಪರೀಕ್ಷೆಯೇ ಜೀವನ. ಈ ಭಾವನೆಯೊಂದಿಗೆ ನಾವು ಬದುಕಲು ಸಾಧ್ಯವಿಲ್ಲ. ಮಕ್ಕಳ ಬೆಳವಣಿಗೆಗಾಗಿ ಅವರನ್ನು ಹೊರಗೆ ಕರೆದುಕೊಂಡು ಹೋಗುವುದು ಮುಖ್ಯ. ಅವರನ್ನು ಪುಸ್ತಕಗಳ ಸೆರೆಮನೆಯಲ್ಲಿ ಬಂಧಿಸಬಾರದು ಎಂದು ಪ್ರಧಾನಿ ಮೋದಿ ತಿಳಿಸಿದರು.
ಪರೀಕ್ಷಾ ಸಿದ್ಧತೆ, ಒತ್ತಡ ನಿರ್ವಹಣೆ ಮತ್ತು ವೃತ್ತಿಜೀವನದ ಆಯ್ಕೆಗಳು ಮತ್ತು ವೈಯಕ್ತಿಕ ಬೆಳವಣಿಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಮನದಟ್ಟು ಮಾಡಿದರು. ಓರ್ವ ವಿದ್ಯಾರ್ಥಿ, ಪರೀಕ್ಷೆಯ ಆತಂಕ ಮತ್ತು ವೈಫಲ್ಯದ ವಿರುದ್ಧ ಹೋರಾಡಲು ವಿದ್ಯಾರ್ಥಿ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, “ವೈಫಲ್ಯವನ್ನು ಹಿನ್ನಡೆ ಎಂದು ಭಾವಿಸದೇ ಅದನ್ನು ಚಲನೆಯ ಇಂಧನವಾಗಿ ನೋಡಬೇಕು ಎಂದರು.
Key words: Pariksha pe charcha, PM Modi, advice