ಪಾಲಿಕೆ ಅಧಿಕಾರಿ, ಗುತ್ತಿಗೆದಾರನ ನಿರ್ಲಕ್ಯ : 63 ಕೋಟಿ ರೂ. “ ಕಸಕ್ಕೆ ಬೆಂಕಿ”  ಬಿತ್ತು..!

Negligence of municipal officer, contractor: Rs 63 crore "The garbage caught fire" at Mysore. A tender worth Rs 63 crore was floated last year itself for the solid waste management work of sewage farm in Mysuru. However, due to the negligence of the contractor and the negligence of the municipal authorities (MCC), the fire broke out in the waste plant and toxic substances were added to the environment, creating panic among the people.

 

ಮೈಸೂರು, ಫೆ.೧೧, ೨೦೨೫ :  ಮೈಸೂರಿನ ಸಿವೇಜ್ ಫಾರಂನ ಘನ ತ್ಯಾಜ್ಯ ನಿರ್ವಹಣೆ ಕಾರ್ಯಕ್ಕಾಗಿ ಕಳೆದ ವರ್ಷವೇ ೬೩ ಕೋಟಿ ರೂ.ಗಳ  ಟೆಂಡರ್‌ ಆಗಿದೆ. ಇಷ್ಟಾದರೂ ಗುತ್ತಿಗೆದಾರನ ಬೇಜಾವ್ದಾರಿ ಹಾಗೂ ನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಯದಿಂದ ತ್ಯಾಜ್ಯ ಘಟಕದಲ್ಲಿ ಬೆಂಕಿ ಬಿದ್ದು ಪರಿಸರಕ್ಕೆ ವಿಷಕಾರಿ ಅಂಶಗಳು ಸೇರ್ಪಡೆಗೊಂಡು ಜನತೆಯಲ್ಲಿ ಆತಂಕ ಸೃಷ್ಠಿಸಿದೆ.

ಇಲ್ಲಿನ ಜೆ.ಪಿ.ನಗರದ ಘನ ತ್ಯಾಜ್ಯ ವಿಲೇವಾರಿ ಘಟಕ ಸೂಯೇಜ್‌ ಫಾರಂನಲ್ಲಿ ಬೆಂಕಿ ಕಾಣಿಸಿಕೊಂಡು ವಿಷಕಾರಿ ಅನಿಲ ಬಿಡುಗಡೆ. ಇದರಿಂದ ಬಡಾವಣೆ ನಿವಾಸಿಗಳಲ್ಲಿ ಗಂಭೀತ ಉಸಿರಾಟದ ಸಮಸ್ಯೆ ಎದುರಾಗಿದೆ. ಜತೆಗೆ ವಾತಾವರಣದ ಆಮ್ಲಜನಕದ ಪ್ರಮಾಣ ಸಹ ಕುಸಿತಗೊಂಡಿದ್ದು ಪರಿಸರಕ್ಕೆ ಹಾನಿಕಾರಕವಾದ ವಾತಾವರಣ ನಿರ್ಮಾಣಗೊಂಡಿದೆ. ಸಂಬಂಧಪಟ್ಟ ನಗರ ಪಾಲಿಕೆ ಅಧಿಕಾರಿಗಳು ದಿವ್ಯ ನಿರ್ಲಕ್ಯವೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

(A fire broke out at a sewage farm where nearly seven lakh Tonnes of legacy waste has accumulated over the years, sending plumes of smoke into the sky, in Mysuru on Sunday)

ಈ ಸಂಬಂಧ ಜಸ್ಟ್‌ ಕನ್ನಡ ಜತೆ ಮಾತನಾಡಿದ ಮಾಜಿ ಮೇಯರ್‌ ಶಿವಕುಮಾರ್‌ ಅವರು ಹೇಳಿದಿಷ್ಟು…

ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ  ಅಸಾದ್ ಉರ್ ರೆಹಮಾನ್ ಶರೀಫ್ ಅವರು 2024ರ ಡಿಸೆಂಬರ್‌ನಲ್ಲಿ, ಘನ ತ್ಯಾಜ್ಯ ನಿರ್ವಹಣೆ ಸಂಬಂಧ ಸೂರತ್ ಮೂಲದ ಡಿ ಹೆಚ್ ಪಟೇಲ್ ಎಂಬ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಒಟ್ಟು ೭ ಲಕ್ಷ ಟನ್‌ ಕಸ ಸಂಗ್ರಹಗೊಂಡಿದ್ದು ಇದನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಸಲುವಾಗಿ ಕೇಂದ್ರ ಸರಕಾರದ ಸಾಲಿಡ್‌ ವೇಸ್ಟ್‌ ಮ್ಯಾನೇಜ್ಮೆಂಟ್‌ ಯೋಜನೆಯಡಿ ಗ್ಲೋಬಲ್‌ ಟೆಂಡರ್‌ ಕರೆಯಲಾಗಿತ್ತು.

ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಿಸಿ ಹಸಿ ಕಸದಿಂದ ಗೊಬ್ಬರವನ್ನು ಹಾಗೂ ಒಣ ಕಸದಿಂದ ಸಿಮೆಂಟ್‌ ಬ್ಲಾಕ್‌ ಇಟ್ಟಿಗೆ ಮಾದರಿ ಇಂಟರ್‌ ಲಾಕಿಂಗ್‌ ಇಟ್ಟಿಗೆ, ಟೈಲ್ಸ್‌ ಮಾಡುವ ಉದ್ದೇಶ ಹೊಂದಲಾಗಿತ್ತು. ಈ ಸಲುವಾಗಿಯೇ ಕಸ ಸೂಕ್ತ ನಿರ್ವಹಣೆಗೆ ಹಾಗೂ ಬೆಂಕಿ ಬೀಳದಂತೆ ಮುಂಜಾಗ್ರತೆ ವಹಿಸಲು ಟೆಂಡರ್‌ ನಲ್ಲಿ ಸೂಚಿಸಲಾಗಿತ್ತು.

ಈ ಕಾರ್ಯದ ಪೂರ್ಣಗೊಳ್ಳುವಿಕೆಯಿಂದ, ಸಿವೇಜ್ ಫಾರಂನಲ್ಲಿ ಘನ ತ್ಯಾಜ್ಯ ನಿರ್ವಹಣೆ ಸುಧಾರಿಸಲಿದೆ, ಇದು ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವ ನಿರೀಕ್ಷೆ ಇದೆ ಎಂದೇ ವಿಶ್ವಾಸ ಹೊಂದಲಾಗಿತ್ತು.

ಆದರೆ ಗುತ್ತಿಗೆದಾರರ ಬೇಜಾವಾಬ್ದಾರಿ ಹಾಗೂ ನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಯದಿಂದ ಈಗ ಮೈಸೂರಿನ ಜನತೆ ಸಂಕಷ್ಟ ಅನುಭವಿಸುವಂತಾಗಿದೆ.

ಕಲುಷಿತ ವಾತಾವರಣ:

ಸೂಯೇಜ್‌ ಫಾರಂಗೆ ಬೆಂಕಿ ಬಿದ್ದ ಕಾರಣ ಕಸದ ರಾಶಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ವಿಷಕಾರಿ ಅನಿಲಗಳನ್ನು ವಾತಾವರಣಕ್ಕೆ ಹೊರ ಸೂಸುತ್ತಿದೆ. ಇದರಿಂದ ಜನತೆಯ ಉಸಿರಾಟದ ಮೇಲೆ ದುಷ್ಪರಿಣಾಮ ಬೀರುವುದು ಮಾತ್ರವಲ್ಲದೆ ಪರಿಸರದ ಆಮ್ಲಜನಕದ ಪ್ರಮಾಣದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ.

ಗುತ್ತಿಗೆದಾರನಿಗೆ ಲಾಭ:

ಈ ರೀತಿ ಘನ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಬೆಂಕಿ ಬಿದ್ದಷ್ಟು, ಇದರ ನಿರ್ವಹಣೆ ಟೆಂಡರ್‌ ಪಡೆದಿರುವ ಗುತ್ತಿಗೆದಾರನಿಗೆ ಅನುಕೂಲ, ಅಂದಾಜು ೭ ಲಕ್ಷ ಟನ್‌ ಕಸ ಸಂಗ್ರಹಣೆಗೊಂಡಿದ್ದು ಅದರ ನಿರ್ವಹಣೆಗೆ ೬೩ ಕೋಟಿ ರೂ. ಟೆಂಡರ್‌ ಪಡೆಯಲಾಗಿದೆ. ಬೆಂಕಿ ಬಿದ್ದು ಕಸ ಸುಟ್ಟು ಹೋಗುವುದರಿಂದ ಆ ಪ್ರಮಾಣದ ಕಸ ನಿರ್ವಹಣೆಯನ್ನು ಗುತ್ತಿಗೆದಾರ ಮಾಡುವಂತಿಲ್ಲ. ಇದರಿಂದ ಆತನಿಗೆ ಆರ್ಥಿಕವಾಗಿ ಲಾಭವೇ ಆಗುತ್ತದೆ. ಆದರೆ ಮೈಸೂರಿನ ಜನತೆಗೆ ಹಣ ನಷ್ಟದ ಜತೆಗೆ ಆರೋಗ್ಯ ಸಮಸ್ಯೆಯನ್ನು ಎದುರಿಸುವ ಸಂಕಷ್ಟ ಸ್ಥಿತಿ ಎದುರಾಗಿದೆ.

key words: sewage farm, Mysuru, solid waste management,fire broke out, MCC

SUMMARY:

Negligence of municipal officer, contractor: Rs 63 crore “The garbage caught fire” at Mysore.

A tender worth Rs 63 crore was floated last year itself for the solid waste management work of sewage farm in Mysuru. However, due to the negligence of the contractor and the negligence of the municipal authorities (MCC), the fire broke out in the waste plant and toxic substances were added to the environment, creating panic among the people.