ಮುಂದಿನ ಮೂರು ವರ್ಷದಲ್ಲಿ ಮಾಧ್ಯಮ ವಲಯದಲ್ಲಿ ಬದಲಾವಣೆ: ಪತ್ರಕರ್ತ ಶೇಖರ್ ಗುಪ್ತಾ

ಬೆಂಗಳೂರು,ಫೆಬ್ರವರಿ,12,2025 (www.justkannada.in):  ತಂತ್ರಜ್ಞಾನ ಬಳಕೆಯಿಂದ ಉದ್ಯೋಗ ಕಡಿತವಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಬದಲಿಗೆ ತಂತ್ರಜ್ಞಾನದಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಹೆಸರಾಂತ ಪತ್ರಕರ್ತ ಶೇಖರ್ ಗುಪ್ತಾ ಬುಧವಾರ ಅಭಿಪ್ರಾಯಪಟ್ಡರು.

ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್-25)ದಲ್ಲಿ ‘ಉದ್ಯಮಶೀಲತೆ ಮತ್ತು ಡಿಜಿಟಲ್ ಆರ್ಥಿಕತೆ’  ಗೋಷ್ಠಿಯಲ್ಲಿ ಮಾತನಾಡಿ, ತಂತ್ರಜ್ಞಾನದಿಂದ ಒಂದು ಉದ್ಯೋಗ ಕಡಿತವಾದರೆ, ಹೊಸ ವಲಯದಲ್ಲಿ ಹಲವು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಹಿಂದೆ ಕಂಪ್ಯೂಟರ್ ಗಳು ಹಾಗೂ ಗೂಗಲ್ ಸರ್ಚ್ ಎಂಜಿನ್ ಬಳಕೆ ಆರಂಭವಾದಾಗ ಮಾಧ್ಯಮ ಸಂಸ್ಥೆಗಳಲ್ಲಿ ಪ್ರೂಫ್ ರೀಡರ್ ಗಳು ಕೆಲಸ ಕಳೆದುಕೊಂಡರು. ಆದರೆ ಕಂಪ್ಯೂಟರ್ ಆಧಾರಿತ ಹಲವು ಉದ್ಯೋಗಗಳು ಸೃಷ್ಟಿಯಾದವು. ಹಾಗೆಯೇ ಈಗ ಎಐ, ಗೂಗಲ್ ಟ್ರಾನ್ಸ್ ಲೇಟ್ ತಂತ್ರಜ್ಞಾನದಿಂದ ಅನುವಾದಕರ ಉದ್ಯೋಗ ಕಡಿತವಾಗಬಹುದೆಂಬ ಆತಂಕ ತಲೆದೋರಿದೆ. ಆದರೆ ಬೇರೆ ಬಗೆಯ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಮುಂದಿನ ಮೂರು ವರ್ಷಗಳಲ್ಲಿ ಮಾಧ್ಯಮ ವಲಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಇಂದು ಯಾವುದೇ ಸುದ್ದಿ ಬಹುಬೇಗನೇ ಎಲ್ಲಡೆ ತಲುಪುವ ವ್ಯವಸ್ಥೆ ಇದೆ. ಮಾಧ್ಯಮಗಳ ಬಗ್ಗೆ ಜನರೂ ಹೆಚ್ಚು ಜಾಗೃತರಾಗಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ ಆಧಾರಿತ ಸುದ್ದಿಜಾಲಗಳಲ್ಲಿ ವ್ಯಾಪಕ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದರು.

ಸಾಮಾಜಿಕ ಮಾಧ್ಯಮಗಳ ಪ್ರಸಕ್ತ ಯುಗದಲ್ಲಿ ಗಂಭೀರ ಹಾಗೂ ಸುದೀರ್ಘ ಲೇಖನಗಳನ್ನು ಓದುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಹಾಗೆ ನೋಡಿದರೆ ಪತ್ರಿಕೆಗಳ ಸಂಪಾದಕೀಯವನ್ನು ಓದುವವರ ಸಂಖ್ಯೆ ಶೇಕಡಾ 1ಕ್ಕಿಂತ ಕಡಿಮೆ ಇದೆ. ಬದಲಿಗೆ 50ರಿಂದ 100 ಪದಗಳಿರುವ ಚಿಕ್ಕ ಬರಹಗಳು ಜನರನ್ನು ಹೆಚ್ಚು ತಲುಪುತ್ತವೆ ಎಂದರು.

ಮುಂದಿನ ಹತ್ತು ವರ್ಷಗಳಲ್ಲಿ ಭಾರತೀಯ ಭಾಷೆಗಳ ಪರಿಸ್ಥಿತಿಯಲ್ಲೂ ವ್ಯಾಪಕ ಬದಲಾವಣೆಯಾಗಲಿದೆ ಎಂದರು.

ಉದ್ಯಮಿ ಪ್ರಶಾಂತ್ ಪ್ರಕಾಶ್ ಗೋಷ್ಠಿ ನಿರ್ವಹಿಸಿದರು.

ENGLISH SUMMARY…

GIM Invest Karnataka 25

Shekhar Gupta Talks AI, Job Losses, and Entrepreneurial Journey

Bengaluru: Shekhar Gupta, Editor-in-Chief of The Print, on Wednesday, shared his perspective on the evolving role of AI in media and his entrepreneurial journey during a fireside chat with Prashanth Prakash, Managing Partner, Accel, at the Global Investors Meet in Bengaluru.

Addressing concerns about AI’s impact on journalism, Gupta acknowledged that while AI can assist in tasks like translation, content creation is not something The Print uses it for. He emphasized the importance of ethical standards and the need for editorial control, explaining that all content passes through stringent plagiarism filters. “AI will not replace editors or journalists,” Gupta said. “Rather, new technology will create more opportunities in media. The AI tools for translation into Indian languages, for instance, are quite impressive, and we plan to expand into vernacular content soon.”

Gupta also discussed his personal journey into media entrepreneurship, explaining how he began his venture The Print later in life. He revealed that after many years as an editor, he initially thought of starting a blog or writing columns post-retirement. However, a lunch meeting with Sunny Varkey in Dubai changed his perspective. “Varkey told me it’s never too late to start a business,” Gupta recalled. “You start when the opportunity arises.” And so, Gupta took the plunge, founding The Print nearly a decade ago. He found the process of building a newsroom for his own venture both thrilling and rewarding.

With seed capital support from Nandan Nilekani, Gupta has worked tirelessly to establish The Print as a trusted media brand. Despite the challenges of the media industry, he remains optimistic. “Trust is the most important asset in journalism,” he said. “Once you build that, the market will reward you.” However, he also noted the struggle of operating in a resource-consuming, people-centric business where digital algorithms don’t prioritize quality journalism. “The media industry is slow and patient work,” Gupta added, reflecting on the slow journey toward sustainability.

Gupta also touched on India’s media landscape, noting that the country lags behind the global trend of paid news subscriptions by at least three years. “In India, most people break paywalls to access news. At The Print, we leave it to the self-respect of individuals and don’t enforce a paywall,” he explained.

As he reflects on his entrepreneurial journey, Gupta remains focused on the long-term vision for The Print. “Tomorrow’s leadership will emerge from here,” he concluded, highlighting his hope for the next generation of media leaders to come from his platform.

Key words: GIM Invest Karnataka, Shekhar Gupta, AI, Job Losses, Entrepreneurial Journey