2047ಕ್ಕೆ ಭಾರತ 30 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆ: ರಾಜ್ಯಕ್ಕೆ ಸಂಪೂರ್ಣ ಸಹಕಾರ- ಕೇಂದ್ರ ಸಚಿವ ಪೀಯೂಷ್ ಗೋಯಲ್

ಬೆಂಗಳೂರು,ಫೆಬ್ರವರಿ,13,2025 (www.justkannada.in):  ರಾಜ್ಯಗಳ ಪ್ರಗತಿಯೇ ದೇಶದ ಪ್ರಗತಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಹಭಾಗಿತ್ವ ಹಾಗೂ ಸಹಕಾರ ತತ್ತ್ವದ ಮೇಲೆ ಕೆಲಸ ಮಾಡಿದರೆ ಭಾರತವು 2047ರ ಹೊತ್ತಿಗೆ 30 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯಾಗಿ ಬೆಳೆಯಲಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರವು ಕರ್ನಾಟಕಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು ಆಶ್ವಾಸನೆ ಕೊಟ್ಟಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದ ಆರ್ಥಿಕತೆ ಮತ್ತು ಕೈಗಾರಿಕಾ ರಂಗದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡುತ್ತಿರುವ 15 ಉದ್ಯಮಗಳಿಗೆ ‘ಇನ್ವೆಸ್ಟ್ ಕರ್ನಾಟಕ’ ಪ್ರಶಸ್ತಿ ಪುರಸ್ಕಾರಗಳನ್ನು ಅವರು ಪ್ರದಾನ ಮಾಡಿದರು. ಜತೆಗೆ ರಾಜ್ಯದ ಕೈಗಾರಿಕಾ ಯಶೋಗಾಥೆಗಳ `ಕರ್ನಾಟಕ ಸಕ್ಸಸ್ ಸ್ಟೋರೀಸ್’ ಸಂಪುಟವನ್ನು ಅವರು ಬಿಡುಗಡೆ ಮಾಡಿದರು.

ಕಳೆದ ವರ್ಷ ಮೂಲಸೌಕರ್ಯ ಅಭಿವೃದ್ಧಿಗೆ 11 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ತುಮಕೂರಿನಲ್ಲಿ 8,000 ಎಕರೆ ವಿಸ್ತೀರ್ಣದಲ್ಲಿ ಪ್ಲೇ ಅಂಡ್ ಪ್ಲಗ್ ಮಾದರಿಯಲ್ಲಿ ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿಗೆ ಚಾಲನೆ ನೀಡಲಾಗಿದೆ. 1,736 ಎಕರೆಯಲ್ಲಿ ಇದರ ಮೊದಲ ಹಂತದ ಅಭಿವೃದ್ಧಿ ಪ್ರಗತಿಯಲ್ಲಿದ್ದು, 2026ರ ಕೊನೆಯ ಹೊತ್ತಿಗೆ ಇದು ಮುಗಿಯಲಿದೆ ಎಂದು ಅವರು ಭರವಸೆ ನೀಡಿದರು.

ಇಡೀ ಜಗತ್ತಿನಲ್ಲಿ ಭಾರತವು ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣವಾಗಿದೆ. ನಮ್ಮಲ್ಲಿರುವ ಪ್ರಜಾಸತ್ತೆ, ಬೇಡಿಕೆ, ಜನಸಂಖ್ಯೆ, ಡಿಜಿಟಲೀಕರಣ ಮತ್ತು ವೈವಿಧ್ಯಗಳೇ ಭಾರತದ ಐದು ಶಕ್ತಿಗಳಾಗಿವೆ. ಸದ್ಯದಲ್ಲೇ ದೇಶದಲ್ಲಿ ಇನ್ನೂ 75 ನೂತನ ವಿಮಾನ ನಿಲ್ದಾಣಗಳು, 120 ನಗರಗಳಿಗೆ ಉಡಾನ್-2 ಅಡಿಯಲ್ಲಿ ವಿಮಾನ ಸಂಪರ್ಕ, 114 ಜಲಮಾರ್ಗಗಳು, ಈಗಿರುವ ಬಂದರುಗಳಿಗಿಂತ ದುಪ್ಪಟ್ಟು ಬಂದರುಗಳು, 50 ಪ್ರವಾಸಿ ತಾಣಗಳ ಅಭಿವೃದ್ಧಿ ಎಲ್ಲವೂ ಅನುಷ್ಠಾನಕ್ಕೆ ಬರಲಿವೆ. ಇದರ ಲಾಭ ಕರ್ನಾಟಕಕ್ಕೂ ಸಿಗಲಿದೆ ಎಂದು ಅವರು ನುಡಿದರು.

ಭಾರತದ ರಫ್ತು ವಹಿವಾಟು ಈಗ 800 ಬಿಲಿಯನ್ ಡಾಲರ್ ಮುಟ್ಟಿದ್ದು, ಇದರಲ್ಲಿ ಕರ್ನಾಟಕದ ಸಿಂಹಪಾಲಿದೆ. ಕೇಂದ್ರ ಸರಕಾರವು ನಾವೀನ್ಯತೆಗೆ 20 ಸಾವಿರ ಕೋಟಿ ರೂ, ಸೆಮಿಕಾನ್ ಮಿಷನ್ ಗೆ 74 ಸಾವಿರ ಕೋಟಿ ರೂ ಮತ್ತು ಕೈಗಾರಿಕೆಗಳಿಗೆ ಪಿಎಲ್ಐ ಆಧರಿತ ಪ್ರೋತ್ಸಾಹಕ್ಕೆ 2 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಡೀಪ್-ಟೆಕ್, ಫಿನ್-ಟೆಕ್, ಫ್ಯೂಚರ್ ಇಂಡಸ್ಟ್ರಿಗಳಿಗೆ ಸಮೃದ್ಧ ಅವಕಾಶಗಳಿದ್ದು, ದೇಶವನ್ನು ಮುನ್ನಡೆಸಲಿದೆ ಎಂದು ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಚಾರ ಸಮಸ್ಯೆ ಪರಿಹಾರಕ್ಕೆ 1 ಲಕ್ಷ ಕೋಟಿ ರೂ. ವೆಚ್ಚ

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ 1 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಲಾಗುವುದು. ಇದರಲ್ಲಿ ಫ್ಲೈಓವರ್, ಸೇತುವೆಗಳು, ಡಬ್ಬಲ್ ಡೆಕ್ಕರ್ ಮಾರ್ಗಗಳು, ಹೊಸ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಸಚಿವ ಎಂ ಬಿ ಪಾಟೀಲ್ ಮಾತನಾಡಿ, ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಉದ್ಯಮಸ್ನೇಹಿ ನೀತಿಗಳು ಇತರರಿಗೆ ಮಾದರಿಯಾಗಿವೆ. ಸುಸ್ಥಿರ ಬೆಳವಣಿಗೆಯತ್ತ ದಾಪುಗಾಲು ಇಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ ಜೆ ಜಾರ್ಜ್, ಡಾ.ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಎನ್ ಎಸ್ ಬೋಸರಾಜು, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಉದ್ಯಮಿ ನಿಖಿಲ್ ಕಾಮತ್ ಉಪಸ್ಥಿತರಿದ್ದರು.

 ವಿಕ್ರಮ್ ಕಿರ್ಲೋಸ್ಕರ್ ಗೆ `ಇಂಡಸ್ಟ್ರಿಯಲ್ ಲೆಗಸಿ’ ಗರಿ

ಸಮಾರಂಭದಲ್ಲಿ ಹಿರಿಯ ಸಾಧಕ ಉದ್ಯಮಿ, ದಿವಂಗತ `ವಿಕ್ರಮ್ ಕಿರ್ಲೋಸ್ಕರ್ ಅವರಿಗೆ `ಇಂಡಸ್ಟ್ರಿಯಲ್ ಲೆಗಸಿ’ ಪುರಸ್ಕಾರವನ್ನು ನೀಡಿ, ಗೌರವಿಸಲಾಯಿತು. ಅವರ ಪರವಾಗಿ ಗೀತಾಂಜಲಿ ಕಿರ್ಲೋಸ್ಕರ್ ಪ್ರಶಸ್ತಿ ಸ್ವೀಕರಿಸಿದರು. ಉಳಿದಂತೆ ದಾಲ್ ಸ್ಟೀಲ್ ಗ್ರೂಪ್ ಗೆ `ದಶಮಾನದ ಹೂಡಿಕೆದಾರ’, ಏಕಸ್ ಕಂಪನಿಗೆ `ಕಾರ್ಯಪರಿಸರ ನಿರ್ಮಾತೃ’, ಸನ್ ರೈಸ್ ವಲಯದಲ್ಲಿ ಸಾರ್ವಜನಿಕ ವಲಯದ ಎಚ್ಎಎಲ್, ಖಾಸಗಿ ವಲಯದ ಆರ್.ಟಿ.ಎಕ್ಸ್ (ವೈಮಾಂತರಿಕ್ಷ & ರಕ್ಷಣಾ ವಲಯ), ಟೊಯೋಟಾ-ಕಿರ್ಲೋಸ್ಕರ್ (ವಾಹನ/ಇವಿ), ಬಯೋಕಾನ್ (ಬಿಟಿ/ಜೀವವಿಜ್ಞಾನ), ಬೋಯಿಂಗ್ (ಇಂಟರ್ನ್ಯಾಷನಲ್ ಪ್ರೊಕ್ಯೂರ್ಮೆಂಟ್ ಚಾಂಪಿಯನ್), ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (ಆರ್ & ಡಿ), ಸ್ಯಾಮ್ಸಂಗ್ (ಇನ್ನೋವೇಶನ್ ಎಕ್ಸಲೆನ್ಸ್), ಫಾಕ್ಸಕಾನ್ (ಇನ್ವೆಸ್ಟೆಂಟ್ ಟೈಟನ್), ಟಾಟಾ ಎಲೆಕ್ಟ್ರಾನಿಕ್ಸ್ (ಉತ್ಪಾದನೆ), ಇನ್ಫೋಸಿಸ್ (ಉದ್ಯೋಗಸೃಷ್ಟಿ), ಶಾಹಿ (ಉತ್ಕೃಷ್ಟ ನಾಯಕತ್ವ) ಮತ್ತು ರೆನ್ಯೂ ಪವರ್ (ಮರುಬಳಕೆ ಇಂಧನ) ಕಂಪನಿಗಳಿಗೆ ವಿವಿಧ ವಿಭಾಗಗಳಲ್ಲಿ ‘ಇನ್ವೆಸ್ಟ್ ಕರ್ನಾಟಕ’ಪುರಸ್ಕಾರಗಳನ್ನು ನೀಡಲಾಯಿತು.

ENGLISH SUMMARY..

GIM Invest Karnataka 25

India’s Economy to Reach $30 Trillion by 2047, Full Support to Karnataka: Piyush Goyal

Bengaluru: Union Commerce and Industries Minister Piyush Goyal assured on Wednesday that with continued cooperation between the central and state governments, India will become a $30 trillion economy by 2047. He emphasised that the central government will fully support Karnataka in realising its economic potential.

During the GIM Invest Karnataka 25, Goyal presented the ‘Invest Karnataka’ awards to 15 businesses that have made significant contributions to the state’s economic and industrial growth. Additionally, he unveiled the Karnataka Success Stories compilation, which highlights the state’s industrial achievements.

In the past year, the government has allocated Rs. 11 lakh crore for infrastructure development. The industrial smart city in Tumakuru, covering 8,000 acres, has begun operations under the “Play and Plug” model. The first phase, spanning 1,736 acres, is expected to be completed by the end of 2026, Piyush noted.

Union Minister highlighted India’s growing reputation as a hub for investment, emphasising the country’s strengths, including its democracy, demand, population, digitalisation, and diversity. He mentioned that in the near future, India will see the development of 75 new airports, flight connectivity to 120 cities under UDAN-2, 114 waterways, double the existing number of ports, and 50 new tourist destinations. These initiatives will benefit Karnataka as well, he added.

India’s export trade has reached $800 billion, with Karnataka playing a pivotal role in this achievement. The central government has earmarked Rs. 20,000 crore for innovation, Rs. 74,000 crore for the semiconductor mission, and Rs. 2 lakh crore for industry incentives under the PLI scheme. Piyush expressed confidence that Karnataka will lead the way in deep-tech, fintech, and future industries in the coming years.

Deputy Chief Minister D. K. Shivakumar announced that Rs.1 lakh crore will be allocated to resolve Bengaluru’s traffic congestion. The funds will be used to develop flyovers, bridges, double-decker routes, and new roads to alleviate traffic issues in the city.

Industries Minister M. B. Patil stressed that Karnataka’s industry-friendly policies have set a model for other states to follow. He added that the state is making strides towards sustainable development.

Recognition of industrial excellence

During the event, the late Vikram Kirloskar, a distinguished industrialist, was honoured with the Industrial Legacy award. His wife, Geetanjali Kirloskar, accepted the award on his behalf. Other awards were presented to companies for their outstanding contributions:
Daal Steel Group – “Decade-long Investor”
AXIS Company – “Infrastructure Creator”
HAL (Public Sector) and RTX (Private Sector) – “Aerospace & Defence”
Toyota Kirloskar – “Automobile/EV”
Biocon – “Biotechnology”
Boeing – “International Procurement Champion”
Texas Instruments – “R&D”
Samsung – “Innovation Excellence”
Foxconn – “Investment Titan”
Tata Electronics – “Manufacturing”
Infosys – “Job Creation”
Shahi – “Leadership Excellence”
Renew Power – “Renewable Energy”

These companies were recognised for their contributions to the industrial and economic development of Karnataka, making significant strides in their respective sectors.

Key words: Invest Karnataka 2025, trillion economy, Union Minister, Piyush Goyal