ಪೊಲೀಸ್ ವಿಚಾರಣೆಯಲ್ಲಿ ಮಧ್ಯೆ ಪ್ರವೇಶಿಸಲ್ಲ: ಅಮಾಯಕರಿಗೆ ತೊಂದರೆ ಆಗಬಾರದು- ಶಾಸಕ ತನ್ವೀರ್ ಸೇಠ್

ಮೈಸೂರು,ಫೆಬ್ರವರಿ,13,2025 (www.justkannada.in):  ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯಲ್ಲಿ ನಾನು ಮಧ್ಯೆ ಪ್ರವೇಶಿಸಲ್ಲ. ಆದರೆ ಅಮಾಯಕರಿಗೆ ತೊಂದರೆ ಆಗಬಾರದು ಎಂದು  ಶಾಸಕ ತನ್ವೀರ್ ಸೇಠ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಶಾಸಕ ತನ್ವೀರ್ ಸೇಠ್,  ಪೊಲೀಸ್ ಇಲಾಖೆ ಅವತ್ತೇ ರಾತ್ರಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಘಟನೆ ನಡೆಯಬಾರದಿತ್ತು  ನಡೆದಿದೆ.  ಸಾವಿನ ಮನೆಯಲ್ಲಿ ರಾಜಕೀಯ ಮಾಡಬಾರದು. ಸ್ಥಳೀಯ ಮುಖಂಡರು ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಈಗ ಉದಯಗಿರಿ ಸಹಜ ಸ್ಥಿತಿಗೆ ಬಂದಿದೆ. ಪೊಲೀಸ್ ಇಲಾಖೆ ಸಿಸಿ ಟಿವಿ ಫೂಟೇಜಸ್ ನೋಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾರೇ ತಪ್ಪು ಮಾಡಿದರೂ ಕಾನೂನಿ ಅಡಿ ಕ್ರಮ ಜರುಗಿಸಲಾಗುತ್ತದೆ ಎಂದರು.

ಪೊಲೀಸ್ ವಿಚಾರಣೆಯಲ್ಲಿ ನಾನು ಮಧ್ಯೆ ಪ್ರವೇಶ ಮಾಡಲ್ಲ. ಆದರೆ ಒಂದು ಮಾತು ಹೇಳುತ್ತೇನೆ. ಅಮಾಯಕರಿಗೆ ತೊಂದರೆ ಆಗಬಾರದು. ಈ ಘಟನೆಗೆ ಮೂಲ ಕಾರಣ ಯಾರು. ಆ ಪೋಸ್ಟ್ ಹಾಕಿದ್ದು ಯಾರು?  ಸಿದ್ಧ ಪಡಿಸಿದ್ದು ಯಾರು? ಅಂತಹವರನ್ನು ಪತ್ತೆ ಹಚ್ಚಿ ಅಂತ ಹೇಳಿದ್ದೇನೆ  ಎಂದರು.

ಪೋಸ್ಟ್ ಮಾಡಿದ ಸಂದರ್ಭದಲ್ಲಿ ದೂರು ನೀಡಿದ ಬಳಿಕವೂ ಎಫ್. ಐ.ಆರ್ ಹಾಕಲು ಪೋಲಿಸರು ವಿಳಂಬ ಮಾಡಿದ್ದಕ್ಕೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆದರೂ ಕಾನೂನಿನಡಿ ಹೋರಾಟ ಮಾಡಬೇಕಿತ್ತು. ಧರ್ಮದ ಬಗ್ಗೆ ಅವಹೇಳನ ಮಾಡಿರುವುದಕ್ಕಾಗಿ ವಿಕೋಪಕ್ಕೆ ಹೋಗಿದೆ. ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪಾಗಿದೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಪೊಲೀಸ್ ಇಲಾಖೆ ಮುಕ್ತವಾಗಿ ತನಿಖೆ ಮಾಡಲು ಹೇಳಿದ್ದೇನೆ. ಅಮಾಯಕರಿಗೆ ತೊಂದರೆ ಕೊಡಬೇಡಿ ಅಂತನೂ ಹೇಳಿದ್ದೇನೆ . ಪ್ರಚೋದನೆ ಕೊಟ್ಟಿದ್ದರೆ ಅಂತವರ ಮೇಲೆ ಕೂಡ ಕ್ರಮ ಆಗಲಿ ಎಂದು ತನ್ವೀರ್ ಸೇಠ್ ತಿಳಿಸಿದರು.

Key words: Udayagiri, stone pelting, MLA, Tanveer Sait