ಉದಯಗಿರಿ ಗಲಭೆ ಕೇಸ್: ಪೋಸ್ಟ್ ಹಾಕಿದ್ದ ಆರೋಪಿ ಕೋರ್ಟ್ ಗೆ ಹಾಜರುಪಡಿಸಿ ಪೊಲೀಸರು

ಮೈಸೂರು,ಫೆಬ್ರವರಿ,14,2025 (www.justkannada.in): ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿದ್ದ ಆರೋಪಿಯನ್ನ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟರ್ ಹಾಕಿದ್ದ ಆರೋಪದ ಮೇಲೆ ಸತೀಶ್ ಬಂಧಿಸಲಾಗಿದ್ದು ಇಂದು ಮೈಸೂರಿನ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ. ನ್ಯಾಯಾಧೀಶರ ಎದುರು ಆರೋಪಿ ಸತೀಶ್ ಎಂಬುವವರನ್ನು ಹಾಜರುಪಡಿಸಲಾಗಿದೆ.

ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಪೋಸ್ಟರ್ ಹಾಕಿದ್ದ ಆರೋಪ ಹಿನ್ನೆಲೆಯಲ್ಲಿ ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ತೂರಾಟ ನಡೆದು ಗಲಭೆ ಉಂಟಾಗಿತ್ತು. ಇದೀಗ ಉದಯಗಿರಿ ಸಹಜಸ್ಥಿತಿಗೆ ಮರಳಿದೆ.

Key words: Udayagiri, riot case, accused, mysore, court