ಪೊಲೀಸರನ್ನು ಕುಗ್ಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ-ಕೆ.ಎನ್ ರಾಜಣ್ಣ ಹೇಳಿಕೆಗೆ ಪರಮೇಶ್ವರ್ ಟಾಂಗ್

ಮೈಸೂರು,ಫೆಬ್ರವರಿ,14,2025 (www.justkannada.in): ಪೋಸ್ಟ್ ಹಾಕಿದ್ದ ಆರೋಪಿಯನ್ನ ಉದಯಗಿರಿ ಪೊಲೀಸ್ ಠಾಣೆಗೆ ಏಕೆ ಕರೆದೊಯ್ಯಬೇಕಿತ್ತು. ಪೊಲೀಸರಿಗೆ ಕಾಮನ್ ಸೆನ್ಸ್ ಇಲ್ವಾ ಎಂದು ಕಿಡಿಕಾರಿದ್ದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರಿಗೆ ಪರೋಕ್ಷ ಟಾಂಗ್ ಕೊಟ್ಟಿರುವ ಗೃಹ ಸಚಿವ ಡಾಜಿ.ಪರಮೇಶ್ವರ್, ಪೊಲೀಸರನ್ನು ಕುಗ್ಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಇಂದು ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಘಟನೆಯಲ್ಲಿ ಯಾರೇ ಇದ್ದರೂ ಶಿಕ್ಷೆ ಆಗತ್ತೆ. ಕಾನೂನು ಕೈಗೆ ಎತ್ತಿಕೊಂಡರೆ ಸುಮ್ಮನೆ ಇರುವುದಿಲ್ಲ. ನಾನು ಘಟನೆ ಏಕಾಯಿತು. ಯಾರಿಂದ ಆಯಿತು ಅಂತ ತನಿಖೆ ಮಾಡಲು ಹೇಳಿದ್ದೆ. ಈಗ ಪ್ರಾಥಮಿಕ ಮಾಹಿತಿ ಪಡೆಯಲು ಇಲ್ಲಿಗೆ ಬಂದಿದೇನೆ. ಅಧಿಕಾರಿಗಳು ನನಗೆ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ತನಿಖೆಗೆ ಈಗಾಗಲೇ ಆದೇಶ ಮಾಡಿರುವುದರಿಂದ ಏನೆಲ್ಲಾ ಚರ್ಚೆ ಆಗಿದೆ, ಘಟನೆಯಲ್ಲಿ ಯಾರು ಇದ್ದಾರೆ ಅದೆಲ್ಲ ಹೇಳೋಕೆ ಆಗಲ್ಲ. ಪೊಲೀಸರಿಗೆ, ವಾಹನಗಳಿಗೆ , ಠಾಣೆಗೆ ಕಲ್ಲು ಹೊಡೆದವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ. ಪೊಲೀಸರು ಸಿಸಿ ಟಿವಿ ಫೂಟೇಜ್ ಪರಿಶೀಲನೆ ಮಾಡಿ  ತನಿಖೆ ಮಾಡುತ್ತಿದ್ದಾರೆ ಎಂದರು.

ಪೊಲೀಸ್ ಇಲಾಖೆಗೆ ಕಾನೂನು ಅಷ್ಟೇ ಮುಖ್ಯ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಪಕ್ಷ ವ್ಯಕ್ತಿ ಪೊಲೀಸರಿಗೆ ಮುಖ್ಯವಲ್ಲ. ಪೊಲೀಸರನ್ನು ಕುಗ್ಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ತೆಗೆದುಕೊಂಡು ಮನೆ ಕೆಡವುತ್ತಾರೆ. ನಮ್ಮ ಜನ ಆ ಮಟ್ಟಕ್ಕೆ ಹೋಗಿಲ್ಲ. ಅಲ್ಲಿನ ರೀತಿ ಮಾಡೋದಕ್ಕೆ ಇಲ್ಲಿ ಬರಲ್ಲ. ಅಂತಹ ಪರಿಸ್ಥಿತಿ ಬಂದಾಗ ನೋಡೋಣ. ಆದರೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ. ಘಟನೆ ಸಂಬಂಧ ಪೊಲೀಸರು ತೆಗೆದುಕೊಂಡ ಬಗ್ಗೆ ಯಾರೂ ಏನೇ ಹೇಳಿದರೂ ಆ ಬಗ್ಗೆ ನಾನು ಉತ್ತರ ಕೊಡಲ್ಲ. ನಾನು ಏನು ಕೆಲಸ ಮಾಡಬೇಕು ಆ ಬಗ್ಗೆ ಪೊಲೀಸರಿಗೆ ಹೇಳಿದ್ದೇನೆ . ಅದನ್ನು ಅವರು ಮಾಡುತ್ತಿದ್ದಾರೆ. ಇದರಲ್ಲಿ ಯಾರು ರಾಜಕೀಯ ಮಾಡಬಾರದು. ಯಾವ ಪಕ್ಷದವರಾದರೂ ರಾಜಕೀಯ ಬೇಡ  ಎಂದು ಪರಮೇಶ್ವರ್ ತಿಳಿಸಿದರು.

Key words: Udayagiri roit, police, Home Minister, Parameshwar