ಮೈಸೂರು,ಫೆಬ್ರವರಿ,15,2025 (www.justkannada.in): ಬೆಂಗಳೂರು ಅರಮನೆಗೆ ಟಿಡಿಆರ್ ಫಿಕ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದ ಯದುವೀರ್, ಸುಪ್ರೀಂಕೋರ್ಟ್ ಮೊದಲೇ ಆದೇಶ ನೀಡಿತ್ತು. ಸರ್ಕಾರ ಮೊದಲಿನಿಂದಲೂ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ನಮಗೆ ಟಿಡಿಆರ್ ಸರ್ಟಿಫಿಕೇಟ್ ನೀಡಿದರೆ ಸಾಕು. ಆದರೆ ಸರ್ಕಾರ ಇದಕ್ಕೆ ಮನಸ್ಸು ಮಾಡುತ್ತಿಲ್ಲ. ಸರ್ಕಾರ ಟಿಡಿಆರ್ ಹಣ ನೀಡುವುದಿಲ್ಲ. ನಾವು ನ್ಯಾಯಾಲಯದಲ್ಲಿ ಕೇಸ್ ಗೆದ್ದರೂ ಟಿಡಿಆರ್ ನೀಡುತ್ತಿಲ್ಲ. ಇದು ಜನಸಾಮಾನ್ಯರಿಂದ – ರಾಜನಿಗೂ ಕೂಡ ನೀಡಲೇಬೇಕು. ಆದರೆ ಸರ್ಕಾರ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ. ಜನರೇ ಇದನ್ನ ಮುಂದಿನ ದಿನಗಳಲ್ಲಿ ಪ್ರಶ್ನೆ ಮಾಡ್ತಾರೆ. ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ನಾನು ಮಾತನಾಡಲ್ಲ. ರಸ್ತೆ ಅಗಲೀಕರಣ ಮಾಡಬೇಕಾದರೆ ಟಿಡಿಆರ್ ನೀಡಿ ಎಂಬುದಷ್ಟೇ ನನ್ನ ಬೇಡಿಕೆ. ಆದರೆ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ ಕುರುಬಾರಹಳ್ಳಿ, ಗರಿಕೆಮಾಳ ಯಾವ ವಿಷಯದಲ್ಲೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ಮೊದಲಿನಿಂದಲೂ ನನ್ನನ್ನ ಹಾಗೂ ಅರಮನೆಯನ್ನ ಟಾರ್ಗೆಟ್ ಮಾಡುತ್ತಿದ್ದಾರೆ. 1996 ರಿಂದಲೂ ಕೂಡ ಅರಮನೆ ಟಾರ್ಗೆಟ್ ಆಗಿದೆ. ನಾನು ಸಂಸದನಾದ ಮೇಲೆ ಈ ವಿಚಾರ ಹೆಚ್ಚು ಮುನ್ನಲೆಗೆ ಬರುತ್ತಿದೆ. ಮೂರು ದಶಕದಿಂದ ತಂದೆಯವರು ಕಷ್ಟ ಅನುಭವಿಸಿದರು. ಇಡೀ ಅರ್ಧ ಜೀವನ ನ್ಯಾಯಾಲಯದ ವ್ಯಾಜ್ಯದಲ್ಲೇ ಕಳೆದರು. ಅವರ ಬದುಕೇ ನಿರಂತರ ಹೋರಾಟವಾಗಿತ್ತು. ತಂದೆಯವರು ಹೋರಾಟ ಮಾಡಿಯೇ ಕಾಲವಾದರು. ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ ಎಂದು ಸಂಸದ ಯದುವೀರ್ ತಿಳಿಸಿದರು.
Key words: Bangalore Palace, government, TDR , MP Yaduveer