ಬೆಳಗಾವಿ,ಫೆಬ್ರವರಿ,17,2025 (www.justkannada.in): ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆಯಾಗುತ್ತಾರೆ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಕೌಂಟರ್ ಕೊಟ್ಟಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ದೇಶದಲ್ಲಿ ಪ್ರಧಾನಿ ಬದಲಾಗ್ತಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಪ್ರಧಾನಿ ಹುದ್ದೆಯಿಂದ ಮೋದಿ ಅವರನ್ನ ಕೆಳಗಿಳಿಸಿ ಬೇರೆಯವರನ್ನ ಪಿಎಂ ಮಾಡಿ. ನಿತಿನ್ ಗಡ್ಕರಿ ಅವರನ್ನೇ ಪಿಎಂ ಮಾಡಿ ಎಂದಿದ್ದಾರೆ.
ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ಸಚಿವರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಪ್ರಧಾನಿ ಮೋದಿ ಬದಲಾಗಬಹುದು. ‘ಬಿಜೆಪಿ ನಾಯಕರು ಮೋದಿ ಸಾಧನೆ ಬಗ್ಗೆ ಮಾತ್ರ ಮಾತನಾಡುತ್ತಾರೆ. ಆದರೆ, ಯಾರೂ ಉಳಿದ ನಾಯಕರ ಸಾಧನೆ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಹಾಗಾಗಿ ಪ್ರಧಾನಿ ಮೋದಿ ಬದಲಾವಣೆ ಆಗಬಹುದು ಎಂಬ ಚರ್ಚೆ ಇದೆ ಎಂದು ಟಾಂಗ್ ಕೊಟ್ಟಿದ್ದಾರೆ.
Key words: PM, will, change, Minister, Santosh Lad