ಉದಯಗಿರಿ ಕಲ್ಲು ತೂರಾಟ ಕೇಸ್: ಸಬ್ ಇನ್ಸ್‌ ಪೆಕ್ಟರ್ ವರ್ಗಾವಣೆ

ಮೈಸೂರು,ಫೆಬ್ರವರಿ,18,2025 (www.justkannada.in): ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉದಯಗಿರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ ಪೆಕ್ಟರ್ ರೂಪೇಶ್ ರನ್ನು ವರ್ಗಾವಣೆ ಮಾಡಲಾಗಿದೆ.

ನಗರ ಪೊಲೀಸ್ ಆಯುಕ್ತರ ಕಚೇರಿಯ ಆಟೋಮೇಷನ್ ಸೆಂಟರ್‌  ಸಬ್ ಇನ್ಸ್‌ ಪೆಕ್ಟರ್ ರೂಪೇಶ್ ಅವರನ್ನು  ವರ್ಗಾವಣೆ  ಮಾಡಿ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

ಗಲಾಟೆ ತಡೆಯಲು ಅವಕಾಶ ಇದ್ದರೂ ಕೂಡ ನಿರ್ಲಕ್ಷ್ಯ  ಮಾಡಿದ ಆರೋಪ ಕೇಳಿ ಬಂದಿತ್ತು.  ಹಾಗೆಯೇ ಆಕ್ಷೇಪಾರ್ಹ ಪೊಸ್ಟ್ ಹಾಕಿದ್ದ ಆರೋಪಿ ಸತೀಶ್ ಆಲಿಯಾಸ್ ಪಾಂಡುರಂಗನನ್ನ ರೂಪೇಶ್‌ ಠಾಣೆಗೆ ಕರೆತಂದಿದ್ದರು. ಆದರೆ ಬೆಳಿಗ್ಗೆಯಿಂದ ಸಂಜೆಯವರೆಗೂ ಸತೀಶ್ ಮೇಲೆ ಯಾವುದೇ ಕ್ರಮ ಕೈಗೊಳ್ಳಲು  ಇನ್ಸ್ ಪೆಕ್ಟರ್ ರೂಪೇಶ್ ಹಿಂದೇಟು ಹಾಕಿದ್ದು, ಇದರಿಂದ ಮುಂದೆ ಮುಸ್ಲಿಂ ಯುವಕರ ಗುಂಪು ಜಮಾಯಿಸಿ ಗಲಾಟೆ ನಡೆಸಿತ್ತು. ಈ ಮಧ್ಯೆ ರೂಪೇಶ್ ಅವರ ವಿರುದ್ದ ಹಲವು  ಆರೋಪಗಳು ಕೇಳಿ ಬಂದ ಬೆನ್ನಲ್ಲೆ ವರ್ಗಾವಣೆ ಮಾಡಲಾಗಿದೆ.

Key words: Udayagiri, stone pelting, case, Sub-Inspector, transferred