ಮೈಸೂರು, ಫೆಬ್ರವರಿ, 20: ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡುವ ಸಲುವಾಗಿ ಉನ್ನತ ಶಿಕ್ಷಣ ಇಲಾಖೆ ಆರಂಭಿಸಿರುವ ಪದವಿ ಕಾಲೇಜು ಪ್ರವೇಶಾತಿ ಅಭಿಯಾನವನ್ನು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಆರಂಭಿಸಿದೆ.
ಪದವಿ ಶಿಕ್ಷಣಕ್ಕೆ ಹೆಣ್ಣುಮಕ್ಕಳ ಪ್ರವೇಶಾತಿ ಹೆಚ್ಚು ಮಾಡುವುದು ಮತ್ತು ಉನ್ನತ ಶಿಕ್ಷಣದ ಕುರಿತು ಹೆಣ್ಣುಮಕ್ಕಳಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ.
ಕಾಲೇಜು ಶಿಕ್ಷಣ ಇಲಾಖೆಯ ಆದೇಶದನ್ವಯ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ಮೈಸೂರು ವತಿಯಿಂದ 2025-26 ನೆಯ ಸಾಲಿನ “ಪ್ರವೇಶಾತಿ ಅಭಿಯಾನ” ಆರಂಭಿಸಿ ಇಲ್ಲಿನ ಸರ್ಕಾರಿ ಮಹಾರಾಣಿ ಪದವಿ ಪೂರ್ವ ಕಾಲೇಜು ಮತ್ತು ದೇವರಾಜ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜು ನೂರಡಿ ರಸ್ತೆ, ಬಾಲಕಿಯರ ಪದವಿ ಪೂರ್ವ ಕಾಲೇಜು ನಿಜಾಮಿಯಾ, ಬಾಲಕಿಯರ ಪದವಿ ಪೂರ್ವ ಕಾಲೇಜು, ರಾಜೀವನಗರ ಇಲ್ಲಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪದವಿಗೆ ಸೇರುವಂತೆ ಮಾಹಿತಿಯನ್ನು ನೀಡಲಾಯಿತು.
ಪ್ರಾಂಶುಪಾಲ ಡಾ.ಅಬ್ದುಲ್ ರಹಿಮಾನ್, ಸಂಚಾಲಕ ಡಾ.ಸಿ.ಎಸ್.ಕೆಂಡಗಣ್ಣೇಗೌಡ ಸದಸ್ಯರುಗಳಾದ ಡಾ.ಶೀಲ.ಟಿ, ಡಾ.ಸಿದ್ದೇಗೌಡ ಎಸ್ , ಡಾ.ರಮೇಶ ಬಾಬು ವಿ.ಆರ್. ಡಾ.ರೆಹಮತ್, ಸರ್ದಾರ್ ಹುಸೇನ್, ಮಮತಾದೇವಿ, ಡಾ.ವಿಂದುವಾಹಿನಿ, ಬೃಂದ, ಚೇತನ್ ಮಾಳಗವಿ, ಚೇತನ್ ಹಂಜಿ, ಸಿದ್ದರಾಜು, ಡಾ.ರಾಮಚಂದ್ರ, ಸೋಮಶೇಖರ್, ಡಾ. ಪರಶುರಾಮ ಮೂರ್ತಿ,ಡಾ.ಎಚ್.ಜೆ.ಭೀಮೇಶ್, ಡಾ.ನಟರಾಜ ಮತ್ತಿತರರು ಹಾಜರಿದ್ದರು.
key words: Maharani’s Science College, admission drive, Mysore
Maharani’s Science College for Women launches admission drive