ಮೈಸೂರು,ಫೆಬ್ರವರಿ,21,2025 (www.justkannada.in): ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಿಜೆಪಿ ಬಂಡಾಯ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ನಾಡಅಧಿದೇವತೆಗೆ ಪೂಜೆ ಸಲ್ಲಿಸಿದ್ದಾರೆ.
ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನೋಟಿಸ್ ಗೆ ಪ್ರತಿಯಾಗಿ ಉತ್ತರ ಬರೆದಿರುವ ಫೈಲ್ ಅನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ.
ನೋಟಿಸ್ ನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರಿರುವ ಕುರಿತು ಮಾಹಿತಿ ಇದೆ ಎನ್ನಲಾಗಿದೆ . ಚಾಮುಂಡಿ ತಾಯಿ ಬಳಿ ಶಾಸಕ ಯತ್ನಾಳ್ ಸುಧೀರ್ಘ ಪ್ರಾರ್ಥನೆ ಸಲ್ಲಿಸಿದ್ದಾರೆ.
ಆರಂಭದಿಂದಲೂ ಬಿಜೆಪಿ ಬಂಡಾಯ ನಾಯಕರು ಚಾಮುಂಡಿ ತಾಯಿ ಮೊರೆ ಹೋಗಿದ್ದು, ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಬಂಡಾಯದ ಕಹಳೆ ಊದಿದ್ದರು.ಬಿ.ವೈ.ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಶಾಸಕ ಯತ್ನಾಳ್, ಬಂಡಾಯದ ಬಳಿಕ ಮೂರನೇ ಬಾರಿಗೆ ಚಾಮುಂಡಿ ತಾಯಿ ದರ್ಶನ ಪಡೆದಿದ್ದಾರೆ.
Key words: BJP, rebel leader, Yatnal , visits, Chamundi Hills