ಮೈಸೂರು,ಫೆಬ್ರವರಿ,21,2025 (www.justkannada.in): ಕಿಟ್ ವಿತರಣೆ ನೆಪದಲ್ಲಿ ಅಧಿಕಾರಿಗಳು ಕಾರ್ಮಿಕರನ್ನ ಕರೆಸಿಕೊಂಡು ರಕ್ತ ಹೀರುತ್ತಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂಜನಗೂಡು ತಾಲೂಕು ಅಧಿಕಾರಿಗಳು ಕಿಟ್ ವಿತರಿಸುವ ನೆಪದಲ್ಲಿ ಕಾರ್ಮಿಕರನ್ನ ಕರೆಸಿ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಬೆವರು ಸುರಿಸುವ ಕಾರ್ಮಿಕರ ರಕ್ತವನ್ನೂ ಬಿಡದ ಅಧಿಕಾರಿಗಳು, ಇದೀಗ ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಣೆ ಕಾರ್ಯಕ್ರಮವಿದೆ ಎಂದು ಕಾರ್ಮಿಕರನ್ನ ಕರೆಸಿಕೊಂಡು ಕಿಟ್ ಕೊಡಬೇಕಾದರೆ ಆರೋಗ್ಯ ತಪಾಸಣೆ ಮಾಡಿಸಬೇಕೆಂಬ ಕಂಡೀಷನ್ ಹಾಕಿದ್ದಾರೆ.
ಈ ವೇಳೆ ಕಾರ್ಮಿಕರು ಹೊರಗೆ ತಪಾಸಣೆ ಮಾಡಿಸಿ ಸರ್ಟಿಫಿಕೇಟ್ ತಂದು ನೀಡುತ್ತೇವೆಂದರೂ ಒಪ್ಪದ ಅಧಿಕಾರಿಗಳು, ಕಾರ್ಮಿಕ ಇಲಾಖೆ ಕರೆದುಕೊಂಡು ಬಂದ ಅಧಿಕಾರಿಗಳಿಂದಲೇ ತಪಾಸಣೆ ಮಾಡಿಸಿ ಎಂದು ಒತ್ತಾಯ ಮಾಡಿದ್ದಾರೆ. ಅಲ್ಲದೆ ಕಳೆದ ವರ್ಷ ಮಾಡಿಸಿದ ತಪಾಸಣೆಯ ವರದಿಯನ್ನೇ ಅಧಿಕಾರಿಗಳು ಈವರಗೆ ನೀಡಿಲ್ಲ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ತಪಾಸಣೆ ನಡೆಸಲಾಗಿದೆ ಎಂದು ರೈತ ಮುಖಂಡ ಕಂದೇಗಾಲ ಶ್ರೀನಿವಾಸ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬೆಳಗ್ಗೆ ಬಂದ ಕಾರ್ಮಿಕರಿಗೆ ಸಂಜೆವರೆಗೂ ತಪಾಸಣೆ ಮಾಡುತ್ತಾರೆ. ಸಂಜೆವರೆಗೂ ಊಟ- ತಿಂಡಿ ಇಲ್ಲದೆ ತಪಾಸಣೆ ನಡೆಸಿದರೆ ವರದಿ ಸರಿಯಾಗಿ ಬರುತ್ತದೆಯೇ? ಕಾಟಾಚಾರಕ್ಕೆ, ಹಣ ಮಾಡುವ ಉದ್ದೇಶದಿಂದ ತಪಾಸಣೆ ನಡೆಸುತ್ತಿದ್ದಾರೆ. ವೈದ್ಯರೇ ಇಲ್ಲದೆ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆಂದು ರೈತ ಮುಖಂಡ ಕಂದೇಗಾಲ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ.
ಶ್ವಾಸಕೋಶ, ಕಿಡ್ನಿ, ಹೃದಯ, ಲಿವರ್ ಫಂಕ್ಷನ್ ಇಲ್ಲ. 20 ಬಗೆಯ ಚಿಕಿತ್ಸೆ ಮಾಡುವಂತೆ ಸೂಚನೆ ಇದೆ. ಯಾವುದೇ ಪರಿಕರಗಳಿಲ್ಲದೆ, ಯಾವುದೇ ವೈದ್ಯರಿಲ್ಲದೆ ತಪಾಸಣೆ ನಡೆಸಲಾಗುತ್ತಿದೆ. ಕಾರ್ಮಿಕರ ರಕ್ತ ತೆಗೆದುಕೊಂಡು ಸಾವಿರ ರೂ ಕಿಟ್ ಕಳುಹಿಸಿ ಕೊಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಓರ್ವ ಕಾರ್ಮಿಕನ ತಪಾಸಣೆಗೆ ಸರ್ಕಾರ ಮೂರುವರೆ ಸಾವಿರ ಹಣ ನೀಡುತ್ತೆ ಎಂದು ರೈತಮುಖಂಡ ಕಂದೇಗಾಲ ಶ್ರೀನಿವಾಸ್ ತಿಳಿಸಿದ್ದಾರೆ.
ಇನ್ನು ರೈತ ಶ್ರೀನಿವಾಸ್ ಆರೋಪಿಸುತ್ತಿದ್ದಂತೆ ತಪಾಸಣೆಯೇ ಬೇಡ ಎಂದು ಅಧಿಕಾರಿಗಳು ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿಲ್ಲ ಎನ್ನಲಾಗಿದೆ. ಅಧಿಕಾರಿಗಳ ನಡೆ ಕುರಿತು ಕಾರ್ಮಿಕರು ಅನುಮಾನ ವ್ಯಕ್ತಪಡಿಸಿದ್ದು, ಸಚಿವ ಸಂತೋಷ್ ಲಾಡ್ ಈ ಕುರಿತು ಗಮನ ಹರಿಸಬೇಕು ಎಂದು ಕಾರ್ಮಿಕರು ಒತ್ತಾಯ ಮಾಡಿದ್ದಾರೆ.
Key words: Officer, blood, distributing, kits, Workers, Mysore