ಬೆಂಗಳೂರು,ಫೆಬ್ರವರಿ,22,2025 (www.justkannada.in): ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ವಿಚಾರ ಸಂಬಂಧ ನಾವ್ಯಾರು ವಿಚಲಿತರಾಗಿಲ್ಲ. ಚುನಾವಣೆ ಪ್ರಕ್ರಿಯೆ ನಡೆಯಲಿ. ನಾವು ತೆಗೆದುಕೊಂಡ ನಿರ್ಧಾರಿಂದ ಹಿಂದೆ ಸರಿದಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದರು.
ಇಂದು ಮಾತನಾಡಿದ ಕುಮಾರ್ ಬಂಗಾರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ಕರ್ನಾಟಕ ಭಾಗದವರು. ಅವರ ಧ್ವನಿಯಲ್ಲಿ ಏರಿಳಿತ ಇರಬಹುದು. ರಾಜಕೀಯವಾಗಿ ನಮ್ಮ ಮಾತು ನಡವಳಿಕೆ ಪೂರಕವಾಗಿರಬೇಕು ದೇವೇಗೌಡರು ಕುಮಾರಸ್ವಾಮಿ ನಮ್ಮ ಪಕ್ಷದ ಜೊತೆಗಿದ್ದಾರೆ ಎಂದರು.
ನಾವು ತೆಗೆದುಕೊಂಡ ನಿರ್ಧಾರದಿಂಧ ಹಿಂದೆ ಸರಿದಿಲ್ಲ. ಚುನಾವಣೆಯಿಂದ ಹಿಂದೆ ಸರಿದ್ದಿದ್ದೇವೆ ಅಂತಾ ಚರ್ಚೆಯಾಗುತ್ತಿದೆ ಕೇಂದ್ರ ನಾಯಕರಿಗೆ ವರದಿ ಸಲ್ಲಿಸಿದ್ದೇವೆ. ಶಿವರಾಜ್ ಸಿಂಗ್ ಚೌಹಾಣ್ ಬರುವ ದಿನಾಂಕ ನಿಗದಿಯಾಗಿಲ್ಲ. ಕೇಂದ್ರದ ವರಿಷ್ಠರು ಯಾವುದೇ ನಿರ್ಧಾರದ ಬಗ್ಗೆ ಚರ್ಚೆಮಾಡಿಲ್ಲ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ನಮ್ಮ ಹೇಳಿಕೆಗೆ ನಾವು ಬದ್ಧರಿದ್ದೇವೆ. ನೋಟಿಸ್ ಅನ್ನೋದು ರಾಜಕೀಯವಲ್ಲ. ಶಾಸಕ ಯತ್ನಾಳ್ ಉತ್ತರ ನೀಡಿದ್ದಾರೆ. ಯತ್ನಾಳ್ ಹಿಂದೆ ನಾವೆಲ್ಲಾ ಇದ್ದೇವೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.
Key words: BJP, state President election, Kumar Bangarappa