ಕರ್ನಾಟಕ ವಸ್ತುಪ್ರದರ್ಶನ  ಪ್ರಾಧಿಕಾರಕ್ಕೆ ಸಿಎಂ ಭರ್ಜರಿ ಗಿಫ್ಟ್: 20 ಕೋಟಿ ರೂ. ಅನುದಾನ ಬಿಡುಗಡೆ

ಮೈಸೂರು,ಫೆಬ್ರವರಿ,22, 2025 (www.justkannada.in): ಕರ್ನಾಟಕ ವಸ್ತು ಪ್ರದರ್ಶನ  ಪ್ರಾಧಿಕಾರಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ  ಗಿಫ್ಟ್ ನೀಡಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನ ಪ್ರಾಧಿಕಾರದ ಅಧ್ಯಕ್ಷನಾಗಿ ಮಾಡಿ ಪ್ರಾಧಿಕಾರದ ಅಭಿವೃದ್ಧಿಗೆ 20 ಕೋಟಿಯನ್ನ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಾಧಿಕಾರದ ವತಿಯಿಂದ ಧನ್ಯವಾದಗಳನ್ನ‌ ತಿಳಿಸುತ್ತೇನೆ  ಎಂದರು.

ಈ ಬಾರಿಯ ದಸರ ವಸ್ತು ಪ್ರದರ್ಶನ ಅತ್ಯಂತ ಯಶಸ್ವಿಯಾಯಿತು. ವರ್ಷದ 365 ದಿನಗಳ ಕಾಲ ವಸ್ತು ಪ್ರದರ್ಶನ ಏರ್ಪಾಡು ಮಾಡುವ ಉದ್ದೇಶ ನಾವು ಇಟ್ಟುಕೊಂಡು ಸಿಎಂ ಗಮನಕ್ಕೆ ಯೋಜನೆ ಬಗ್ಗೆ ಪ್ರಸ್ತಾವನೆ ಕೊಟ್ಟಿದ್ದವು. ಈಗ 20 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ವಸ್ತು ಪ್ರದರ್ಶನದ ಎ.ಬ್ಲಾಕ್ ನಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಬೇಲೂರು ಹಳೇಬೀಡು ಮಾದರಿಯ ಕಟ್ಟಡ ನಿರ್ಮಾಣ ಮಾಡುವ ಯೋಜನೆ ತಯಾರಿಸಿದ್ದೇವೆ. ಅಲ್ಲಿ ವಾಟರ್ ಪೌಂಟೇನ್ ಕೂಡ ಇರುತ್ತದೆ. ಅಲ್ಲಿ ಈಗಾಗಲೇ 154 ಅಂಗಡಿ ಮಳಿಗೆಗಳು ಇವೆ. ನಮ್ಮ ಯೋಜನೆಗಳನ್ನ ಒಪ್ಪಿ ನಮಗೆ 20 ಕೋಟಿಯನ್ನ ಕೊಟ್ಟಿರುವುದಕ್ಕೆ ಮೈಸೂರಿನ ಜನತೆ ಪರವಾಗಿ ಸಿಎಂ ಸಿದ್ದರಾಮಯ್ಯರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ಇಷ್ಟೇ ಅಲ್ಲದೆ ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗದಲ್ಲೂ ವಸ್ತು ಪ್ರದರ್ಶನ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಅಲ್ಲಿನ ಸ್ಥಳೀಯ ಜಿಲ್ಲಾಡಳಿತದೊಂದಿಗೆ ಸಭೆ ಕರೆದು ಅಲ್ಲೂ ಕೂಡ ವಸ್ತು ಪ್ರದರ್ಶನ ಏರ್ಪಾಡು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮುಂಬರುವ ದಸರಾ ವಸ್ತು ಪ್ರದರ್ಶನ ಒಳಗೆ ಕಾಮಗಾರಿ ಮುಗಿಸುವ ಪ್ಲಾನ್ ಇದೆ. ದಸರಾ ವಸ್ತು ಪ್ರದರ್ಶನದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ ಎಂದು ತಿಳಿಸಿದರು.

ಡಾಲಿ ಧನಂಜಯ್ ರಿಂದ ಮದುವೆ ಸಮಾರಂಭಕ್ಕೆ ಬಾಡಿಗೆಯಾಗಿ 5.5 ಲಕ್ಷ ಹಣ.

ಡಾಲಿ ಧನಂಜಯ್ ಮದುವೆ ಸಮಾರಂಭಕ್ಕೆ ವಸ್ತು ಪ್ರದರ್ಶನ ಆವರಣಕ್ಕೆ  ಬಾಡಿಗೆಯಾಗಿ 5.5 ಲಕ್ಷ ಹಣ ಕೊಟ್ಟಿದ್ದಾರೆ. ಈಗಾಗಲೇ ಶೇ 50% ಸೆಟ್ ಗಳನ್ನೆಲ್ಲ ತೆರವು ಮಾಡಿದ್ದಾರೆ. ಅದೆಲ್ಲ ಮುಗಿದ ಬಳಿಕ ಈವೆಂಟ್ ಮ್ಯಾನೇಜ್  ಮೆಂಟ್ ನವರು ಎಲ್ಲವನ್ನೂ ಸ್ವಚ್ಛ ಮಾಡಿಸಿಕೊಡುತ್ತಾರೆ. ಸದ್ಯಕ್ಕೆ ಯಾವುದೇ ರೀತಿಯ ಬಾಕಿಯನ್ನ ಉಳಿಸಿಕೊಂಡಿಲ್ಲ ಎಂದು  ಅಯೂಬ್ ಖಾನ್ ಹೇಳಿದರು.

Key words: CM, Karnataka Exhibition Authority, Rs 20 crore, grant, Ayub khan