ಮೈಸೂರು,ಫೆಬ್ರವರಿ,22,2025 (www.justkannada.in): ಉದಯಗಿರಿ ವಿವಾದಿತ ಪೋಸ್ಟ್ ಪ್ರಕರಣ ಸಂಬಂಧ, ಪೋಸ್ಟ್ ಮಾಡಿದ್ದ ಸತೀಶ್ @ ಪಾಂಡುರಂಗ ಗಡಿಪಾರಿಗೆ ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 27 ಕ್ಕೆ ಡಿಸಿಪಿ ದಿನಾಂಕ ನಿಗದಿಪಡಿಸಿದ್ದು, ಮತ್ತೊಮ್ಮೆ ಖುದ್ದು ಹಾಜರಾಗುವಂತೆ ಸತೀಶ್ @ ಪಾಂಡುರಂಗಗೆ ಡಿಸಿಪಿ ಸೂಚನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸತೀಶ್, ನನ್ನನ್ನ ಗಡಿಪಾರು ಏಕೆ ಮಾಡುತ್ತೀರಿ? ಗಡಿಪಾರು ಮಾಡಲು ನಾನೇನು ತಪ್ಪು ಮಾಡಿದ್ದೀನಿ..? ನಾನು ಯಾವುದೇ ಕಾರಣಕ್ಕೂ ಗಡಿಪಾರು ಆಗುವುದಿಲ್ಲ ಎಂದಿದ್ದಾರೆ.
ಸತೀಶ್ ಗಡಿಪಾರು ಮಾಡಿದ್ರೆ ನಾವು ಸಹಿಸೋದಿಲ್ಲ-ಪ್ರಮೋದ್ ಮುತಾಲಿಕ್
ಉದಯಗಿರಿ ಪೊಲೀಸ್ ಠಾಣೆ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮುಸ್ಲಿಂರು ಸೆಕ್ಸ್ ಸ್ಕ್ಯಾಂಡಲ್ ಡ್ರಗ್ ಮಾಫಿಯಾ, ಗಾಂಜಾ, ಗ್ಯಾಸ್ ಫಿಲ್ಲಿಂಗ್, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಮೌಲ್ವಿಯನ್ನು ಗಡಿಪಾರು ಮಾಡಬೇಕು. ಅದನ್ನ ಬಿಟ್ಟು ಸತೀಶ್ ಗಡಿಪಾರು ಮಾಡಿದ್ರೆ ನಾವು ಸಹಿಸೋದಿಲ್ಲ ಎಂದಿದ್ದಾರೆ.
ಈ ಗೂಂಡಾ ಪ್ರವೃತ್ತಿ ಕಿಡಿಗೇಡಿಗಳ ಪ್ರೋತ್ಸಾಹಕ್ಕೆ ಕಾಂಗ್ರೆಸ್ ಕಾರಣ. ಶ್ರೀರಾಮಸೇನಾ ಸಂಘಟನೆ ಇದನ್ನು ಖಂಡಿಸುತ್ತದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಘಟನೆಗಳ ನಂತರ ಇಲ್ಲಿ ನಡೆದಿದೆ. ತಮ್ಮ ಏರಿಯಾದದಲ್ಲಿ ಇರುವ ಹಿಂದೂಗಳನ್ನು ಓಡಿಸುವುದು. ಕಳ್ಳದಂಧ ಕಾನೂನು ಬಾಹಿರ ಕಾರ್ಯ ಮುಂದುವರೆಸುವುದು. ಪೊಲೀಸರಿಗೆ ಭಯ ಹುಟ್ಟಿಸುವುದು ಕೆಲಸ ಮುಸ್ಲಿಮ್ ರಿಂದ ನಡೆಯುತ್ತಿದೆ. ಕಾನೂನು ಬಾಹಿರ ಪಿಸ್ತೂಲ್ ಮಾರಾಟ, ಗಾಂಜಾ ಅಫೀಮು ಮಾರಾಟ, ಹೆಲ್ಮೆಟ್ ಇಲ್ಲದೆ ಮೂರು ಜನರು ವಾಹನ ಸವಾರಿ ಮಾಡುವುದು , ಉದಯಗಿರಿಯಲ್ಲಿ ಕಾನೂನು ಇಲ್ಲವೇ..?. ಕಾನೂನು ಮುಸ್ಲಿಮರಿಗೆ ಇಲ್ವಾ…? ಅವರಿಗೆ ಗೊತ್ತು ಏನು ಮಾಡಿದರೂ ಕೇಸ್ ವಾಪಸ್ ತೆಗೆದುಕೊಳ್ಳುತ್ತಾರೆ ಅಂತ ಎಂದು ಕಿಡಿಕಾರಿದರು.
Key words: Udayagiri, riot, case, deported, accused, Satish