ರಾಜ್ಯ ಸುಭೀಕ್ಷವಾಗಿದೆ ಎಂಬ ಭ್ರಮೆಯಲ್ಲಿ ಸಿಎಂ: ಗ್ಯಾರಂಟಿ ನಿಲ್ಲಿಸುವ ಲಕ್ಷಣ ಕಾಣುತ್ತಿದೆ- ಬಿವೈ ವಿಜಯೇಂದ್ರ

ಬೆಂಗಳೂರು,ಫೆಬ್ರವರಿ,24,2025 (www.justkannada.in): ರಾಜ್ಯ ಸರ್ಕಾರದಿಂದ ಗೃಹಜ್ಯೋತಿ ಬಿಲ್ ವಸೂಲಿಗೆ ಪ್ರಸ್ತಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ  ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯನವರೇ ಉತ್ತರ ಕೊಡಬೇಕಿದೆ. ಸಿಎಂ ರಾಜ್ಯ ಸುಭೀಕ್ಷವಾಗಿದೆ ಎಂಬ ಭ್ರಮೆಯಲ್ಲಿದ್ದಾರೆ.  ಆಲ್ ಇಸ್ ವೆಲ್ ಎಂಬ ಭಾವನೆಯಿಂದ ಸಿಎಂ ಸಿದ್ದರಾಮಯ್ಯ ಹೊರಬರಬೇಕು. ಸಾರಿಗೆ ಸಂಸ್ಥೆಗೆ 7 ಸಾವಿರ ಕೋಟಿ ರೂ. ಕೊಡಬೇಕು. ರಾಜ್ಯದಲ್ಲಿ ಗ್ಯಾರಂಟಿ ನಿಲ್ಲಿಸುವ ಲಕ್ಷಣ ಕಾಣುತ್ತಿದೆ. ಎಲ್ಲಾ ಇಲಾಖೆಗಳು ಬಾಗಿಲು ಮುಚ್ಚುವ ಸ್ಥಿತಿ ಬಂದಿದೆ.  ಎಲ್ಲವನ್ನೂ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

Key words: CM, stopping, guarantee, BY Vijayendra