ಮೂಟೆಗಟ್ಟಲೆ ಕಲ್ಲು ತೆಗೆದುಕೊಂಡು ಬಂದು‌ ಹೊಡೆದವರನ್ನ ರಕ್ಷಣೆ ಮಾಡಬೇಕಾ? ಕೇಂದ್ರ ಸಚಿವ ಹೆಚ್ ಡಿಕೆ ಕಿಡಿ

ಮೈಸೂರು,ಫೆಬ್ರವರಿ,24,2025 (www.justkannada.in): ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮೂಟೆಗಟ್ಟಲೆ ಕಲ್ಲು ತೆಗೆದುಕೊಂಡು ಬಂದು‌ ಹೊಡೆದವರನ್ನ ರಕ್ಷಣೆ ಮಾಡಬೇಕಾ? ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಕುವೆಂಪು ಅವರ ಸಂದೇಶ ಜಾರಿಗೆ ಬರಬೇಕು. ರಾಜ್ಯ ಸರ್ವಜನಾಂಗದ ಶಾಂತಿಯ ತೋಟ ಆಗಿ ಉಳಿಯಬೇಕು. ಬಿಜೆಪಿ ಸ್ನೇಹಿತರಿಗೆ ಮನವಿ ಮಾಡಿಕೊಳ್ಳುತ್ತೇನೆ. ಸಮಾಜಕ್ಕೆ ರಕ್ಷಣೆ ನೀಡಬೇಕೆಂದು‌ ಹೋಗುತ್ತೀರಿ. ಮತ್ತೊಂದೆಡೆ ಅವರು‌ ಭದ್ರವಾಗುತ್ತಾ ಹೋಗುತ್ತಾರೆ. ಎರಡೂ ಪಕ್ಷದ ನಾಯಕರಿಗೆ ಮನವಿ ಮಾಡಿಕೊಳ್ಳುತ್ತೇನೆ. ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿಗೆ ಇಂತಹವರನ್ನ ಬಲಿ ಹಾಕಲೇಬೇಕು. ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದವರನ್ನ ಬಲಿ ಹಾಕಬೇಕು. ಎಷ್ಟು ದಿನ ಅಂತ ಇದನ್ನ ಸಹಿಸಿಕೊಳ್ಳುತ್ತೀರಿ. ಯಾರನ್ನೋ ಓಲೈಸಲು ಸರ್ಕಾರ ಇಲ್ಲ. ಕಾನೂನು‌ ಬಾಹಿರ ಚಟುವಟಿಕೆ ನಡೆಸುವವನು‌ ಯಾರೇ ಇರಲಿ ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಮೂಟೆಗಟ್ಟಲೆ ಕಲ್ಲು ತೆಗೆದುಕೊಂಡು ಬಂದು‌ ಹೊಡೆದುವವರನ್ನ ರಕ್ಷಣೆ ಮಾಡಬೇಕಾ? ಎಂದು ಕಿಡಿಕಾರಿದರು.

ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಈ ಸರ್ಕಾರ ಯಾರಿಗೆ ರಕ್ಷಣೆ ಕೊಡುತ್ತದೆ. ಮಂತ್ರಿಗಳೊಬ್ಬರು ಮರಾಠಿಯಲ್ಲೇ ಭಾಷಣ ಮಾಡಿದ್ದಾರೆ. 2006-07 ರಲ್ಲಿ ನಾನು ಸಿಎಂ ಆಗಿದ್ದೆ. ಮನಮೋಹನ್ ಸಿಂಗ್ ಬಳಿ ನಿಯೋಗ ಹೋಗಿದ್ದರು. ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.

ಗೃಹಸಚಿವರಿಗೆ ಪೊಲಿಟಿಕಲ್ ವೈರಾಗ್ಯ

ಗೃಹ ಸಚಿವರು ರಾಜೀನಾಮೆ ನೀಡುವ ಮಾತು ವಿಚಾರ, ಗೃಹಸಚಿವರಿಗೆ ಪೊಲಿಟಿಕಲ್ ವೈರಾಗ್ಯ ಬಂದ ಆಗಿದೆ. ಮರ್ಯಾದಸ್ಥರು ಇರುವುದು ಒಳ್ಳೆಯದಲ್ಲ ಎಂದು‌ ಅನಿಸಿರಬೇಕು ಎಂದು ಹೆಚ್.ಡಿಕೆ ವ್ಯಂಗ್ಯವಾಡಿದರು.

ಮಹದೇವಪ್ಪ ಹೇಳುತ್ತಾರೆ  ಸಿಎಂ ರೆಕಾರ್ಡ್ ಮಾಡಬೇಕು ಅಂತಾರೆ. ಮಹದೇವಪ್ಪ ಅವರೇ, ಎಷ್ಟು ವರ್ಷ ಆಡಳಿತ ನಡೆಸಿದ್ದೀರಿ ಅನ್ನೋದಲ್ಲ. ಈ ನಾಡಿನ ಜನರ ಎಷ್ಟು ಸಮಸ್ಯೆ ಬಗೆಹರಿಸಿದ್ದೀರಿ ಅನ್ನೋದು ಮುಖ್ಯ. ನಮಗೆ 20 ತಿಂಗಳ,  14 ತಿಂಗಳ ಆಡಳಿತ ತೃಪ್ತಿ ಇದೆ. ಗ್ಯಾರೆಂಟಿ‌ ಯೋಜನೆ ಯಾರಪ್ಪನ‌ ದುಡ್ಡು. ಮೆಟ್ರೋ ದರ‌ಏರಿಸಿ ಹಣ ಕೊಡೋಕೆ ನೀವೇ ಆಗಬೇಕಾ?. ಈ ರೀತಿ ದರ ಏರಿಸಿದರೆ‌ ನಾನು 10 ಸಾವಿರ ರೂ ಕೊಡುತ್ತೇನೆ ಎಂದು ಹೆಚ್.ಡಿಕೆ ಟಾಂಗ್ ಕೊಟ್ಟರು.

ಕಳೆದ‌‌ ಕೆಲವು ದಿನಗಳಿಂದ ಅನಾರೋಗ್ಯ ಕಾಡುತ್ತಿದೆ. ಹಲವು ದಿನಗಳ ಬಳಿಕ‌ ಈವತ್ತೇ ಮನೆಯಿಂದ ಹೊರ ಬಂದಿರುವುದು. 19 ನೇ ಕಂತಿನ ಕಿಸಾನ್ ಹಣ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ‌ಮೋದಿ ಅವರ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಇಂದು ಭಾಗಿಯಾಗಲಿದ್ದೇನೆ ಎಂದರು.

ರೈತರು, ಮಹಿಳೆಯರು, ಯುವಕರು, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡುವುದು ಈ ಬಾರಿಯ ಬಜೆಟ್ ಆಶಯವಾಗಿದೆ. ಈ ಬಾರಿ 50 ಲಕ್ಷ ಕೋಟಿ ರೂ ಆಯವ್ಯಯ ಮಂಡನೆ ಮಾಡಲಾಗಿದೆ. 11.20 ಲಕ್ಷ ಕೋಟಿ ರೂ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಗೆ ತೀರ್ಮಾನ ಮಾಡಲಾಗಿದೆ.  ರೈತರ ಕೃಷಿವಲಯಕ್ಕೆ 1.72 ಲಕ್ಷ ರೂ ಅನುದಾನ ನೀಡಲಾಗುತ್ತಿದೆ. ಹಿಂದುಳಿದ ನೂರು‌ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ಟಾರ್ಟಪ್ ಗಳ ಮೂಲಕ ಆ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಮೀನುಗಾರಿಕೆ, ಹೈನುಗಾರಿಕೆ, ಚರ್ಮೋದ್ಯಮಕ್ಕೆ ಒತ್ತು, ಯುವಕರಿಗೆ ಲೆದರ್ ಇಂಡಸ್ಟ್ರಿ ಮೂಲಕ ಉದ್ಯೋಗ ಸೃಷ್ಠಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.

Key words: Mysore, JDS, Central minister, HD Kumaraswamy