ಬೆಳಗಾವಿ,ಫೆಬ್ರವರಿ,25,2025 (www.justkannada.in): ಕನ್ನಡ ಮಾತನಾಡು ಎಂದಿದ್ದಕ್ಕೆ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಮಹದೇವಪ್ಪ ವಿರುದ್ದ ದಾಖಲು ಮಾಡಲಾಗಿದ್ದ ಪೋಕ್ಸೋ ಕೇಸ್ ಅನ್ನು ಸಂತ್ರಸ್ತೆ ತಾಯಿ ವಾಪಸ್ ಪಡೆದಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತೆ ತಾಯಿ, ಯಾವುದೇ ಒತ್ತಡ ಇಲ್ಲದೆ ಕಂಡಕ್ಟರ್ ಮಹದೇವಪ್ಪ ವಿರುದ್ದ ನೀಡಿದ್ದ ಪೋಕ್ಸೋ ಕೇಸ್ ವಾಪಸ್ ಪಡೆದಿದ್ದೇವೆ ಎಂದಿದ್ದಾರೆ.
ನಾವೂ ಸಹ ಕನ್ನಡಿಗರು . ನನ್ನ ಮಗ ಮಗಳು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದರು ಈ ವೇಳೆ ಟಿಕೆಟ್ ವಿಚಾರವಾಗಿ ಜಗಳ ಆಗಿತ್ತು. ಇದನ್ನು ಕನ್ನಡ ಮರಾಠಿ ಅಂತಾ ಸುಳ್ಳು ಪ್ರಚಾರ ಮಾಡಿದ್ದಾರೆ. ಭಾಷೆ ಮರಾಟಿ ಆಗಿದ್ದರೂ ನಾವು ಕನ್ನಡಿಗರು. ಈ ಘಟನೆಯಿಂದ ಮಹಾರಾಷ್ಟ್ರ- ಕರ್ನಾಟಕ ನಡುವೆ ಗಲಾಟೆಯಾಗುತ್ತಿದೆ. ಇದರಿಂದ ಬೇಸರವಾಗಿದೆ. ಈ ವಿಚಾರವನ್ನ ಇಲ್ಲಿಗೆ ಬಿಡಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
Key words: POCSO case, against, conductor, withdrawn