ಮಹಾ ಶಿವರಾತ್ರಿ ಸಂಭ್ರಮ: ರಂಗೋಲಿಯಲ್ಲಿ ಅರಳಿದ ಶಿವನ ಚಿತ್ರಗಳು

ಮೈಸೂರು,ಫೆಬ್ರವರಿ,26,2025 (www.justkannada.in): ಇಂದು ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಸಂಭ್ರಮವಾಗಿದ್ದು ಭಕ್ತಾದಿಗಳು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಈ ಮಧ್ಯೆ ಮೈಸೂರಿನ  ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ  ಪಬ್ಲಿಕ್ ಶಾಲೆಯಲ್ಲಿ ಸಮೃದ್ಧಿ ಟ್ರಸ್ಟ್ ಹಾಗೂ ಕೆಎಂಪಿ ಕೆ ಟ್ರಸ್ಟ್ ಮತ್ತು ಜೆಸಿಐ ಮೈಸೂರು ಕಿಂಗ್ ಲೇಡೀಸ್ ವತಿಯಿಂದ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ರೀತಿಯ ಶಿವನ ಚಿತ್ರಗಳು ಮೂಡಿ ಬಂದವು.

ರಂಗೋಲಿ ಸ್ಪರ್ಧೆಯಲ್ಲಿ 50ಕ್ಕೂ ಮಹಿಳೆಯರು ಪಾಲ್ಗೊಂಡು ಶಿವನ ಚಿತ್ರವನ್ನು ಬಿಡಿಸಿದರು. ಅತ್ಯುತ್ತಮ 5 ರಂಗೋಲಿ ಸ್ಪರ್ಧಿಗಳಾದ ರಾಮಾನುಜಾ ರಸ್ತೆಯ ನಿವಾಸಿ ಸುಶೀಲಾ, ಕಲ್ಯಾಣಗಿರಿ ನಿವಾಸಿ ಕೋಮಲಾ, ವಿದ್ಯಾರಣಿಪುರಂ ನಿವಾಸಿ ವನಿತಾ ಸುಭಾಷ್, ಜನಿಷಾ ಎಂ.ಎಚ್. ಹಾಗೂ ಶ್ರೀರಾಂಪುರ ನಿವಾಸಿ ಮಂಗಳಾ ಅವರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಹಿರಿಯ ಸಮಾಜ ಸೇವಕ ಕೆ. ರಘುರಾಮ ವಾಜಪೇಯಿ, ಮಾಜಿ ನಗರ ಪಾಲಿಕಾ ಸದಸ್ಯ ಮಾ.ವಿ ರಾಮ ಪ್ರಸಾದ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಹರ್ಷಿ ಪಬ್ಲಿಕ್ ಶಾಲೆಯ ಸಿಇಓ ತೇಜಸ್ ಶಂಕರ್, ಸಮೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಹನಗೌಡ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸಾಯಿರಾಂ ಫೌಂಡೇಷನ್ ಅಧ್ಯಕ್ಷೆ ಖುಷಿ, ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷೆ ಸವಿತಾ ಘಾಟ್ಕೆ , ವಕೀಲೆ ಜಯಶ್ರೀ ಶಿವರಾಮ್, ಇನ್ನಿತರರು ಉಪಸ್ಥಿತರಿದ್ದರು.

Key words: Maha Shivaratri, celebrations, mysore, Rangoli Competition