ಬೆಂಗಳೂರು,ಫೆಬ್ರವರಿ,26,2025 (www.justkannada.in): 6 ವರ್ಷದ ಮಗನ ಎದುರೇ ಪತಿಯೊಬ್ಬ ಪತ್ನಿಯನ್ನ ಕೊಲೆಗೈದು ಬಳಿಕ ತಾನೂ ನೇಣಿಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬ್ಯಾಡರಹಳ್ಳಿ ಕಾಳಿನಗರದಲ್ಲಿ ಈ ಘಟನೆ ನಡೆದಿದೆ. 33 ವರ್ಷದ ಮಮತಾ ಕೊಲೆಯಾದ ಪತ್ನಿ. ಪತಿ ಸುರೇಶ್ ಎಂಬಾತನೇ ಈ ಕೃತ್ಯವೆಸಗಿರುವುದು. 6 ವರ್ಷದ ಮಗನ ಎದುರೇ ಪತ್ನಿ ಮಮತಾ ಕತ್ತು ಹಿಸುಕಿ ಕೊಲೆಗೈದು ಬಳಿಕ ಸುರೇಶ್ ತಾನೂ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪತ್ನಿಗೆ ವಿಡಿಯೋ ತೋರಿಸಿ ವಿಡಿಯೋದಲ್ಲಿರುವಂತೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪತಿ ಸುರೇಶ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
Key words: Husband, Suicide, murder, wife