ಬೆಂಗಳೂರು,ಫೆಬ್ರವರಿ28,2025 (www.justkannada.in): ಕಳೆದ ಮೂರು ವರ್ಷಗಳಲ್ಲಿ 100 ಬೈಕ್ ಗಳನ್ನ ಕಳ್ಳತನ ಮಾಡಿದ್ದ ಖತರ್ನಾಕ್ ಖದೀಮನನ್ನ ಬೆಂಗಳೂರಿನ ಕೆ ಆರ್ ಪುರಂ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಬಂಗಾರುಪಾಳ್ಯಂ ನಿವಾಸಿಯಾಗಿರುವ ಪ್ರಸಾದ್ ಬಾಬು ಬಂಧಿತ ಆರೋಪಿ. ಈತ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 100 ಬೈಕ್‌ಗಳನ್ನು ಕದ್ದಿದ್ದ ಎನ್ನಲಾಗಿದೆ.
ಬೆಂಗಳೂರಿಗೆ ಆಗಮಿಸುತ್ತಿದ್ದ ಕಳ್ಳ ಪ್ರಸಾದ್ ಬಾಬು ಕೆ ಆರ್ ಪುರಂ, ಟಿನ್ ಫ್ಯಾಕ್ಟರಿ, ಮಹದೇವಪುರ ಸೇರಿದಂತೆ ವಿವಿಧ ಜನವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ. ಮನೆಗಳ ಮುಂದೆ ನಿಲ್ಲಿಸಲಾಗಿದ್ದ ದುಬಾರಿ ಬೆಲೆಯ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಹ್ಯಾಂಡ್ಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರಿನಿಂದ ಬೈಕ್ ಕದ್ದ ಅದೇ ದಿನದಂದೇ ಅದೇ ಬೈಕ್ ನಲ್ಲಿ ತನ್ನ ಊರಿಗೆ ಪರಾರಿಯಾಗುತ್ತಿದ್ದ. ಕದ್ದ ಬೈಕ್‌ಗಳನ್ನು ಕೇವಲ 15 ರಿಂದ 20 ಸಾವಿರ ರೂಪಾಯಿಗಳಿಗೆ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Key words: Accused, stealing, 100 bikes, Arrest