ಕೊಡಗು ,ಫೆಬ್ರವರಿ,28,2025 (www.justkannada.in): ಬೆಂಗಳೂರು ಅರಮನೆ ಜಾಗದ ವಿಷಯದಲ್ಲಿ ಟಿಡಿಆರ್ ಡೆಪಾಸಿಟ್ ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಲೇಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಕೊಡಗಿನ ಕುಶಾಲನಗರದಲ್ಲಿ ಇಂದು ಮಾತನಾಡಿದ ಸಂಸದ ಯದುವೀರ್, ಸರ್ಕಾರಕ್ಕೆ ಇದು ಹಿನ್ನಡೆ ಅಂತ ಹೇಳಲಾಗುತ್ತಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವುದು ನಮಗೆ ಇರಲಿಲ್ಲ. ಇದು ಯಾರಿಗೂ ಒಳ್ಳೆಯದೂ ಅಲ್ಲ. ಅಭಿವೃದ್ಧಿ ಕೆಲಸಗಳಿಗಾಗಿ ಕಾನೂನು ಅನುಸರಿಸುವುದಕ್ಕೆ ನಮಗೆ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಬೇಕು. ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡಬೇಕು ಎನ್ನುವ ಬಯಕೆ ಇದೆ. ಸರ್ಕಾರ ಕಾನೂನು ಪ್ರಕ್ರಿಯೆಯಂತೆ ಕೆಲಸ ಮಾಡಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ ಎಂದರು.
ಟಿಡಿಆರ್ ಕೊಡುವುದಕ್ಕೆ ಅವರ ಖಜಾನೆಯಿಂದ ಒಂದು ರೂಪಾಯಿ ಕೊಡಲ್ಲ. ಇಷ್ಟು ಟಿಡಿಆರ್ ನ ಮಾಲೀಕರು ಅಂತ ಒಂದು ಸರ್ಟಿಫಿಕೇಟ್ ಅಷ್ಟೇ. ಬೆಂಗಳೂರಿನ ಬಳ್ಳಾರಿ ರಸ್ತೆಯ ಟ್ರಾಫಿಕ್ ನಲ್ಲಿ ನಾವೂ ಕೂಡ ಸಿಕ್ಕಿ ಹಾಕಿಕೊಳ್ಳುತ್ತೇವೆ. ನಾವು ಟಿಡಿಆರ್ ಒಪ್ಪಿಕೊಂಡಿರುವುದೇ ಸಮಾಜದ ಹಿತದೃಷ್ಟಿಯಿಂದ. ಟಿಡಿಆರ್ ಕೊಡುತ್ತೇವೆ ಅಂತ 2009ರಲ್ಲೇ ಸರ್ಕಾರ ಒಪ್ಪಿಕೊಂಡಿದೆ. ಅಂದಿನಿಂದ 15 ವರ್ಷದಿಂದ ಕೋರ್ಟ್ ನಲ್ಲಿ ಅದಕ್ಕಾಗಿ ಹೋರಾಡುತ್ತಿದ್ದೇವೆ . ಹೀಗಾಗಿ ಪ್ರಕ್ರಿಯೆಯಂತೆ ಸರ್ಕಾರ ಕೆಲಸ ಮಾಡಲಿ. ಸರ್ಕಾರ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಯದುವೀರ್ ತಿಳಿಸಿದರು.
Key words: Bangalore palace, government, court, order, MP, Yaduveer