ಇಂದಿನಿಂದ ಮೈಸೂರಿನಲ್ಲಿ ಎರಡು ದಿನಗಳ ಕಾಲ ‘CCL’ ಕಲರವ

ಮೈಸೂರು,ಮಾರ್ಚ್,1,2025 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಎರಡು  ದಿನ ಸೆಲೆಬ್ರಿಟಿಸ್ ಕ್ರಿಕೆಟ್ ಕಲರವ ಇರಲಿದ್ದು , ಸಿಸಿಎಲ್ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿದೆ.

ನಗರದ ಮಾನಸ ಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.  ಈಗಾಗಲೇ ಪಂಬಾಬ್ ದೆ ಷೇರ್, ಬೆಂಗಾಲ್ ಟೈಗರ್ಸ್ ,ಕರ್ನಾಟಕ ಬುಲ್ಡೋಜರ್ಸ್, ಹಾಗೂ ಚೆನೈ ರೈನೋರ್ಸ್ ತಂಡ ಸೆಮಿ ಫೈನಲ್ಸ್  ಪ್ರವೇಶಿಸಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಬೆಂಗಾಲ್ ಟೈಗರ್ಸ್ ಹಾಗೂ ಪಂಬಾಬ್ ದೆ ಷೇರ್ ನಡುವೆ ಮೊದಲ ಸೆಮಿ ಫೈನಲ್ ನಡೆಯಲಿದೆ.

ಸಂಜೆ 6:30 ರಿಂದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನೈ ರೈನೋರ್ಸ್ ನಡುವೆ ಎರಡನೇ ಸೆಮಿ ಫೈನಲ್ ಪಂದ್ಯ ನಡೆಯಲಿದ್ದು ಗೆದ್ದ ತಂಡಗಳು ನಾಳೆ  ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ. ಸೆಲೆಬ್ರಿಟಿಸ್ ಕ್ರಿಕೆಟ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Ke words: CCL, Mysore, two days, Karnataka Bulldozers