ಮಂಡ್ಯ,ಮಾರ್ಚ್,1,2025 (www.justkannada.in): ಬಿಜೆಪಿ, ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಶಾಸಕ ಅಶ್ವತ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅಶ್ವತ್ ನಾರಾಯಣ್, ‘ಬಿಜೆಪಿ ಮತ್ತು ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಸಚಿವ ಜಮೀರ್ ಹೇಳಿಕೆ ನೀಡುತ್ತಾರೆ. ನಿಮ್ಮ ಸಂಪರ್ಕದಲ್ಲಿದ್ದರೇ ಏನು ಬೇಕಾದರೂ ಮಾಡಪ್ಪ. ನಿಮಗೆ ಅಡ್ಡ ಬಂದವರೂ ಯಾರಪ್ಪ ಜಮೀರ್?’ ಎಂದು ಲೇವಡಿ ಮಾಡಿದರು.
ನಮ್ಮ ಪಕ್ಷ ಸಧೃಢವಾಗಿದ್ದು, ಯಾರ ಅವಶ್ಯಕತೆಯೂ ಇಲ್ಲ. ರಾಜಕೀಯದಲ್ಲಿ ಯಾರಾದರೂ ಬರಬಹುದು, ಯಾರಾರೂ ಹೋಗಬಹುದು. ನಾನು ಯಾರ ಮೇಲೂ ದ್ವೇಷ ಮಾಡಲ್ಲ. ಆದರೆ ಕಾಂಗ್ರೆಸ್ ರೀತಿ ಕೀಳುಮಟ್ಟದ ರಾಜಕಾರಣ ಮಾಡಲ್ಲ. ಕಾಂಗ್ರೆಸ್ ನಾಯಕರು ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ. ಮುಂದೆ ಚುನಾವಣೆಗೆ ಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುತ್ತೇವೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
Key words: MLA, Ashwath Narayan, Minister, Jameer