ರಾಜ್ಯ ಅಭಿವೃದ್ದಿಯಾಗಿಲ್ಲ, ಕೇವಲ ಕಾಂಗ್ರೆಸ್ ಅಭಿವೃದ್ಧಿಯಾಗಿದೆ- ಆರ್.ಅಶೋಕ್ ಕಿಡಿ

ಬೆಂಗಳೂರು,ಮಾರ್ಚ್,3,2025 (www.justkannada.in):  ರಾಜ್ಯದಲ್ಲಿ ಅಭಿವೃದ್ಧಿಯಾಗಿಲ್ಲ ಕೇವಲ ಕಾಂಗ್ರೆಸ್ ಮಾತ್ರ ಅಭಿವೃದ್ಧಿಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಇಂದು ವಿಧಾನಮಂಡಲ ಬಜೆಟ್ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು  ರಾಜ್ಯ ಸರ್ಕಾರದ ಸಾಧನೆ ಬಗ್ಗೆ ವಿವರಿಸಿದ್ದರು. ಈ ಕುರಿತು ಮಾತನಾಡಿದ ಆರ್.ಅಶೋಕ್,  ರಾಜ್ಯದ ಅಭಿವೃದ್ಧಿಯಾಗಿಲ್ಲ. ಬರೀ ಕಾಂಗ್ರೆಸ್ ಅಭಿವೃದ್ದಿಯಾಗಿದೆ.  ಕಾಂಗ್ರೆಸ್ಸಿಗರು ರಾಜ್ಯಪಾಲರನ್ನ ಹಿಯಾಳಿಸಿದ್ದರು ಈಗ ರಾಜ್ಯಪಾಲರ ಕೈಯಲ್ಲೇ ಭಾಷಣ ಮಾಡಿಸಿದ್ದಾರೆ ಎಂದು ಗುಡುಗಿದರು.

ಕೈಗೆಟುಕುವ ದರದಲ್ಲೇ ಆರೋಗ್ಯ ಸೇವೆ ಎಂದಿದ್ದರು.  ಬಡವರಿಗೆ ಎಲ್ಲಿ ಆರೋಗ್ಯ ಸೇವೆ ಸಿಗುತ್ತಿದೆ. ಸರ್ಕಾರದಿಂದ ಎಸ್ ಸಿ ಎಸ್ಟಿ ಹಣ ದುರುಪಯೋಗವಾಗುತ್ತಿದೆ. ಇವರು ಯಾವ ನೀರಾವರಿ ಯೋಜನೆ ಮಾಡಿದ್ದಾರೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.

Key words:  state, not developed, Congress, developed, R. Ashok