ಬೆಂಗಳೂರು,ಮಾರ್ಚ್,4,2025 (www.justkannada.in): ಮರಾಠ ಪುಂಡರಿಂದ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮತ್ತು ಕರ್ನಾಟಕ ಬಸ್ ಗಳಿಗೆ ಮಸಿ ಬಳಿದಿರುವುದನ್ನು ಖಂಡಿಸಿ ಮಾರ್ಚ್ 22 ರಂದು ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಬೆಳಗಾವಿ ಕಂಡಕ್ಟರ್ ಮೇಲೆ ಹಲ್ಲೆ ನಡೆದು 8ರಿಂದ 10 ದಿನಗಳು ಕಳೆದಿದೆ ನಮ್ಮ ಬಸ್ ಗಳಿಗೆ ಮಸಿ ಬಳಿದಿದ್ರು. ಇದನ್ನ ಖಂಡಿಸಿ ಒಂದೆರೆಡು ದಿನ ಪ್ರತಿಭಟನೆಗಳಾಗಿದ್ದವು. ಆದರೆ ಯಾವುದೇ ಹಾನಿಯಾಗಿಲ್ಲ. ಈಗ ಕರ್ನಾಟಕ ಬಂದ್ ಅವಶ್ಯಕತೆ ಇಲ್ಲ ಹೋರಾಟಗಾರರ ಕನ್ನಡದ ಮೇಲಿನ ಅಭಿಮಾನ ಸ್ವಾಗತಿಸುತ್ತೇವೆ. ಆದರೆ ಮಾರ್ಚ್ 22 ಬಂದ್ ಅವಶ್ಯಕತೆ ಇಲ್ಲ ಎಂದರು.
ಮಹಾರಾಷ್ಟ್ರ ಮತ್ತು ಕರ್ನಾಟಕದ ಬಸ್ ಸಂಚಾರ ಸುಗಮವಾಗಿದ್ದು ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಈ ಹಂತದಲ್ಲಿ ಕರ್ನಾಟಕ ಬಂದ್ ಅಗತ್ಯವಿಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ಹೋರಾಟಗಳಿಗೆ ನಮ್ಮ ಬೆಂಬಲವಿದೆ. ಆದರೆ ಈ ಸಂದರ್ಭದಲ್ಲಿ ಬಂದ್ ಅಗತ್ಯವಿಲ್ಲ ಎಂದರು.
Key words: no need, March 22nd, bandh, Minister, Ramalingareddy