ಮುಡಾ ಕೇಸ್: ಸಿಎಂ ಸಿದ್ದರಾಮಯ್ಯರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇಲ್ಲ-ಶಾಸಕ ಪೊನ್ನಣ್ಣ

ಬೆಂಗಳೂರು,ಮಾರ್ಚ್,5,2025 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ ಗೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ  ಸಲ್ಲಿಕೆ ವಿಚಾರ ಕುರಿತು  ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎ.ಎಸ್ ಪೊನ್ನಣ್ಣ, ಕಾನೂನಿನ ಎಲ್ಲಾ ಪ್ರಕ್ರಿಯೆಗೆ ತಲೆಬಾಗುತ್ತೇವೆ. ಸಿಬಿಐಗೆ ತನಿಖೆಗೆ ಕೋರಿ ಮೇಲ್ಮನವಿ ಸ್ವಾಗತಿಸುತ್ತೇವೆ.  ಸಿಎಂ ಸಿದ್ಧರಾಮಯ್ಯಗೆ ಯಾವುದೇ ಸಂಕಷ್ಟ ಎದುರಾಗುವ ಸಾಧ್ಯತೆ ಇಲ್ಲ. ಸಿಎಂ ಕುರ್ಚಿ ಅಲುಗಾಡುವುದೂ ಇಲ್ಲ. ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ನ್ಯಾಯಾಲಯ ಏನೇ ತೀರ್ಪು ಕೊಟ್ಟರೂ ಸ್ವಾಗತಿಸುತ್ತೇವೆ ಎಂದು ಶಾಸಕ ಪೊನ್ನಣ್ಣ ತಿಳಿಸಿದರು.

Key words: Muda case, CM Siddaramaiah, MLA, Ponnanna