BANDIPURA RESORT KIDNAP: ದಂಪತಿ, ಮಗು ರಕ್ಷಣೆ. ನಾಲ್ವರ ಬಂಧನ.

The case of kidnapping of a couple and a child from Bandipur resort in Gundlupet taluk has come to a happy end. Kidnapped couple, child rescued. Four arrested. Gundlupet police cracked the case within 24 hours.

 

ಚಾಮರಾಜನಗರ, ಮಾ.೦೫,೨೦೨೫ : ಗುಂಡ್ಲುಪೇಟೆ ತಾಲೊಕಿನ ಬಂಡಿಪುರ ರೆಸಾರ್ಟ್ನಿಂದ ದಂಪತಿ ಮತ್ತು ಮಗು ಅಪಹರಣ ಪ್ರಕರಣ ಸುಖಾಂತ್ಯ. ಅಪಹೃತ ದಂಪತಿ, ಮಗು ರಕ್ಷಣೆ. ನಾಲ್ವರ ಬಂಧನ. 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಗುಂಡ್ಲುಪೇಟೆ ಪೋಲಿಸರು.

ವಿಜಯಪುರ ಜಿಲ್ಲೆ ಹೊನ್ನಳ್ಳಿಯಲ್ಲಿ ದಂಪತಿ ಮತ್ತು ಮಗು ರಕ್ಷಣೆ. ಸಾಲ ವಸೂಲಿಗಾಗಿ ಅಪಹರಣ ಮಾಡಿದ್ದ ಆರೋಪಿಗಳು. ಪೋಲಿಸರ ಕ್ಷಿಪ್ರ ಕಾರ್ಯಾಚರಣೆಯಿಂದ ಸುಖಾಂತ್ಯ ಕಂಡ ಕಿಡ್ನಾಪ್ ಪ್ರಕರಣ. ಪತ್ತೆಗೆ ನೆರವಾದ ಕಾರಿನ ಸಂಖ್ಯೆ.

ನಿಶಾಂತ್ ಕುಟುಂಬ ರೆಸಾರ್ಟ್ ನಲ್ಲಿ ತಂಗಿರುವ ವಿಚಾರ ತಿಳಿದು ರೆಸಾರ್ಟ್ ಬಳಿ ಬಂದಿದ್ದ ಓರ್ವ ವ್ಯಕ್ತಿ. ಆತನ ಕಾರಿನ ನಂಬರ್ ಕೆಎ-36-ಬಿ  5638 ಆಧರಿಸಿ ಪ್ರಕರಣ ಭೇದಿಸಿದ ಪೋಲಿಸರು. ಮೂಲತಃ ದಾವಣಗೆರೆ ಜಿಲ್ಲೆಯವ ನಿಶಾಂತ್,ಬೆಂಗಳೂರಿನಲ್ಲಿ ವಾಸ. ಬೆಂಗಳೂರಿನಿಂದ ಬಂಡಿಪುರಕ್ಕೆ ಬಂದು ಕಂಟ್ರಿ ಕ್ಲಬ್ ರೆಸಾರ್ಟ್ ನಲ್ಲಿ ತಂಗಿದ್ದರು. ಪಡೆದ ಸಾಲ ಹಿಂದಿರುಗಿಸದ ಹಿನ್ನಲೆ ಸೋಮವಾರ ಬೆಳಗ್ಗೆ ಅಪಹರಣ.

ವಿಜಯಪುರ ಜಿಲ್ಲೆಯ ಮಲ್ಲಿಕಾರ್ಜುನ(30), ವಿಶ್ವನಾಥ(30), ಈರಣ್ಣ(32) ಹಾಗೂ  ಸಿದ್ದರಾಮಯ್ಯ(40) ಬಂಧಿತ ಆರೋಪಗಳು. ತಲೆ ಮರೆಸಿಕೊಂಡ ಇನ್ನೂ ಮೂವರ ಪತ್ತೆಗಾಗಿ ಹುಡುಕಾಟ.

ನಿಶಾಂತ್ ಕಾರನ್ನ ಅಡ್ಡ ಗಟ್ಟಿ ಆ ಕಾರಿನ‌ ಜೊತೆ ತಾವು ತಂದಿದ್ದ ಕಾರಿನ‌ ಸಮೇತ ಹೋಗಿದ್ದರು. ವಿಜಯಪುರ ಸಿಂದಗಿ ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಪತ್ತೆ. ಹಣಕಾಸು ವಿಚಾರವಾಗಿ ನಡೆದಿರುವ ಘಟನೆ. ಸುದ್ದಿ ಗೋಷ್ಠಿ ಮೂಲಕ ಮಾಹಿತಿ ನೀಡಿದ ಚಾಮರಾಜನಗರ ಎಸ್ಪಿ ಬಿ.ಟಿ ಕವಿತಾ.

key words: BANDIPURA RESORT, KIDNAP, COUPLE, CHILD Rescued, Four arrested.

SUMMARY:

The case of kidnapping of a couple and a child from Bandipur resort in Gundlupet taluk has come to a happy end. Kidnapped couple, child rescued. Four arrested. Gundlupet police cracked the case within 24 hours.