ಬೆಂಗಳೂರು,ಮಾರ್ಚ್,5,2025 (www.justkannada.in): ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ನಿನ್ನೆಯಷ್ಟೆ ಬಂಧನವಾಗಿದ್ದು ನಟಿ ರನ್ಯಾ ರಾವ್ ರನ್ನು 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ನೀಡಿದೆ.
ಈ ಮಧ್ಯೆ 14.20 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪ ನಟಿಯ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾರಾವ್ ಬಳಿ ಡಿಆರ್ಐ ಅಧಿಕಾರಿಗಳು ಚಿನ್ನ, ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಡಿಆರ್ ಐ ಅಧಿಕಾರಿಗಳಿಂದ ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಬೇಟೆಯಾಗಿದ್ದು 12.56 ಮೌಲ್ಯದ ಚಿನ್ನದ ಗಟ್ಟಿ, 2ಕೋಟಿ ಮೌಲ್ಯದ ಚಿನ್ನಾಭರಣ, 2.67 ಕೋಟಿ ರೂ. ನಗದನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ ಒಟ್ಟಾರೆ ಚಿನ್ನಾಭರಣಮ ನಗದು ಸೇರಿ 17.29 ಕೋಟಿ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮೊತ್ತದ ಚಿನ್ನ ವಶಪಡಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ. ಡಿಆರ್ಐ ಅಧಿಕಾರಿಗಳು ರನ್ಯಾ ಬಂಧನ ಬಳಿಕ ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಶನ್ನ ಫ್ಲ್ಯಾಟ್ನಲ್ಲಿ ರನ್ಯಾ ಮನೆ ಇದ್ದು, 5ಕ್ಕೂ ಹೆಚ್ಚು ಅಧಿಕಾರಿಗಳು ಫ್ಲ್ಯಾಟ್ ನಲ್ಲಿ ಪರಿಶೀಲನೆ ನಡೆಸಿದ್ದರು, ಬಳಿಕ 3 ದೊಡ್ಡ ಪೆಟ್ಟಿಗೆಯನ್ನು ನಗದು ಹಣ ಮತ್ತು ಚಿನ್ನವನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ.
Key words: Actress, Ranya Rao, arrest, Rs 17.29 crores, seized