ಮೈಸೂರು, ಮಾ.೦೬,೨೦೨೫: ಬೇಸಿಗೆ ಬಿರು ಬಿಸಿಲ ಧಗೆ ಆರಂಭ. ಬೀದಿ ಬದಿಗೆ ಲಗ್ಗೆ ಇಟ್ಟ ಗುಜರಾತ್ ಮೂಲದ ಮಣ್ಣಿನ ಮಡಕೆಗಳು. ಬೇಸಿಗೆ ಸಂಧರ್ಭದಲ್ಲಿ ತಂಪಾದ ನೀರು ಕುಡಿಯಲು ಮಣ್ಣಿನ ಮಡಿಕೆ ಮೊರೆ ಹೋಗುವ ಜನ. ನಗರದ ಹಲವೆಡೆ ಮಣ್ಣಿನ ಮಡಿಕೆಗಳ ಮಾರಾಟ.
ನಗರದ ಪ್ರಮುಖ ರಸ್ತೆಗಳು,ವೃತ್ತಗಳ ಬಳಿ ಶುರುವಾದ ಮಡಿಕೆ ಮಾರಾಟ. ನಲ್ಲಿ ಇರುವ 10 ಲೀಟರ್, 15 ಲೀಟರ್ ಮತ್ತು 20 ಲೀಟರ್ ಸಾಮರ್ಥ್ಯದ ಮಣ್ಣಿನ ಮಡಕೆಗಳ ಮಾರಾಟ. 10 ಲೀಟರ್ ಮಡಿಕೆಗೆ 500 ರೂ , 20 ಲೀಟರ್ ಮಡಿಕೆಗೆ 900 ರಿಂದ 1000 ಬೆಲೆ.
ಬೇಸಿಗೆ ಸಂಧರ್ಭದಲ್ಲಿ ಒಳ್ಳೆಯ ವ್ಯಾಪಾರದ ನಿರೀಕ್ಷೆಯಲ್ಲಿ ಅನ್ಯ ರಾಜ್ಯದ ವ್ಯಾಪಾರಿಗಳು. ತಂಪು ತಂಪು ಕೂಲ್ ಕೂಲ್ ಎಂದು ತಂಪಾದ ನೀರು ಕುಡಿಯುವ ಖರೀದಿ ಮಾಡಲು ಮುಂದಾದ ಮೈಸೂರಿಗರು.
ಗುಜರಾತ್ ನಿಂದ ರಾಜ್ಯಕ್ಕೆ ತರಲು ಒಂದು ಮಡಿಕೆಗೆ ಸುಮಾರು 200 ರೂ ಖರ್ಚು ಬೀಳಲಿದೆ. ಸಾಗಣೆ ವೇಳೆ ಒಂದಷ್ಟು ಮಡಿಕೆ ಹೊಡೆದು ಲಾಸ್ ಸಹ ಆಗುತ್ತದೆ. ಬಹಳ ಜೋಪಾನ ಮಾಡಿ ತಂದು 50, 100 ರೂ. ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತೇವೆ ಎನ್ನುತ್ತಾರೆ ವ್ಯಾಪಾರಿಗಳು.
ಈಗಷ್ಟೆ ಬೇಸಿಗೆ ಶುರುವಾಗಿದೆ. ಜತೆಗೆ ನಾವು ಸಹ ತಾನೆ ವ್ಯಾಪಾರ ಶುರು ಮಾಡಿದ್ದೇವೆ. ಹಾಗಾಗಿ ಕಡಿಕೆ ಖರೀದಿಗೆ ಇನ್ನೂ ಜನ ಸರಿಯಾಗಿ ಬರ್ತಾ ಇಲ್ಲ. ಮುಂದಿನ ದಿನಗಳಲ್ಲಿ ಜನ ಆಗಮಿಸಿ ಖರೀದಿ ಮಾಡುವ ನಿರೀಕ್ಷೆ ಇದೆ ಎಂಬುದು ವ್ಯಾಪಾರಿಗಳ ವಿಶ್ವಾಸ.
KEY WORDS: Cool pots, beat, the summer, Mysore