ಸಿದ್ದರಾಮಯ್ಯ ಬಜೆಟ್ ನಲ್ಲೂ ದಾಖಲೆ, ಸಾಲದಲ್ಲೂ ದಾಖಲೆ- ಸಿ.ಟಿ ರವಿ ಟೀಕೆ

ಬೆಂಗಳೂರು,ಮಾರ್ಚ್,7,2025 (www.justkannada.in):  ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ 2025-26ನೇ ಸಾಲಿನ ಬಜೆಟ್ ಬಗ್ಗೆ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ, ಸಿಎಂ ಸಿದ್ದರಾಮಯ್ಯರಿಗೆ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಇದೆ. ಹಾಗೆಯೇ ಹೆಚ್ಚು ಸಾಲ ಮಾಡಿದ ಖ್ಯಾತಿಯೂ ಸಿದ್ದರಾಮಯ್ಯಗೆ ಇದೆ. ಇದು ಮುಸ್ಲೀಮರ ಬಜೆಟ್,  ಸಾಲದ ಬಜೆಟ್,  ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ ಎಂದರು.

ಸಿದ್ದರಾಮಯ ಬಜೆಟ್ ನಲ್ಲೂ ದಾಖಲೆ ಸಾಲದಲ್ಲೂ ದಾಖಲೆ ಮಾಡಿದ್ದಾರೆ. ಈ ಹಿಂದಿನ ಬಜೆಟ್ ನಲ್ಲಿ ಘೋಷಿಸಿದ್ದ ಯೋಜನೆಗಳೇ ಇನ್ನು ಅನುಷ್ಟಾನಗೊಂಡಿಲ್ಲ ಎಂದು ಸಿಟಿ ರವಿ ಆರೋಪಿಸಿದರು.

Key words: Siddaramaiah, record, budget, record, debt , CT Ravi