ಬೆಂಗಳೂರು,ಮಾರ್ಚ್,8,2025 (www.justkannada.in): ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಮುಸ್ಲೀಮರಿಗೆ ಆದ್ಯತೆ ನೀಡಲಾಗಿದೆ. ಇದೊಂದು ಕಮ್ಯುನಲ್ ಬಜೆಟ್ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಿಟಿ ರವಿ, ಸಿದ್ದರಾಮಯ್ಯ 16ನೇ ಬಜೆಟ್ ಮಂಡಿಸಿದ್ದಾರೆ ಹೆಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತೆ . 4 ಲಕ್ಷ ಕೋಟಿ ಅಷ್ಟು ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಸಾಲ 1 ಲಕ್ಷದ 27ಸಾವಿರ ಕೋಟಿ ಆಗಿದೆ. ಮುಸ್ಲೀಂ ಧರ್ಮಗುರುಗಳ ಗೌರವಧನ ಹೆಚ್ಚಳ ಮಾಡಲಾಗಿದೆ. ಇದು ಕಾಂಗ್ರೆಸ್ ಬಜೆಟಾ ಅಥವಾ ಮುಸ್ಲೀಮರ ಬಜೆಟಾ? ಎಂದು ಪ್ರಶ್ನಿಸಿದರು.
ಅದೊಂದು ಕಹಿ ಘಟನೆ, ನಾನು ಕೆದಕಲು ಬಯಸಲ್ಲ- MLC ಸಿ.ಟಿ ರವಿ
ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಶಬ್ದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ , ಅದೊಂದು ಕಹಿ ಘಟನೆ, ನಾನು ಅದನ್ನ ಕೆದಕಲು ಬಯಸಲ್ಲ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಎಲ್ಲರಿಗೂ ಒಳ್ಳೆಯದಾಗಲಿ. ನಾನು ಯಾರಿಗೂ ಕೆಟ್ಟದ್ದು ಬಯಸಿ ರಾಜಕಾರಣಕ್ಕೆ ಬಂದಿಲ್ಲ. ಯಾರ ಬಗ್ಗೆ ದ್ವೇಷ ಇಟ್ಟು ಕೊಂಡಿಲ್ಲ. ಹಿಂದುತ್ವ ಉಳಿದರೇ ದೇಶ ಉಳಿಯುತ್ತೆ ಎಂದು ನಂಬಿರುವೆ ಎಂದರು.
ಆಣೆ ಪ್ರಮಾಣ ಕುರಿತು ಪ್ರತಿಕ್ರಿಯಿಸಿದ ಸಿಟಿ ರವಿ, ಈ ರೀತಿ ಏನು ಇಲ್ಲ ನಮ್ಮಲ್ಲೆ ಈ ಕೆಟ್ಟ ಭಾವನೆ ದೂರವಾಗಲಿ ಎಲ್ಲರಿಗೂ ಒಳ್ಳೆಯದಾಗಲಿ. ನಮಗೂ ಒಳ್ಳೇಯದಾಗಲಿ ಎಂದರು.
Key words: Priority, Muslims, communal budget, CT Ravi