16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಖ್ಯಾತ ನಟಿ ‘ಶಬಾನಾ ಆಜ್ಮಿ’ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು,ಮಾರ್ಚ್,8,2025 (www.justkannada.in):  16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ  ಜೀವಮಾನ ಸಾಧನೆ ಪ್ರಶಸ್ತಿಗೆ ಖ್ಯಾತ ನಟಿ ‘ಶಬಾನಾ ಆಜ್ಮಿ’ ಅವರು ಆಯ್ಕೆಯಾಗಿದ್ದಾರೆ.

2024-25ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀಡಲಾಗುವ “ಜೀವಮಾನ ಸಾಧನೆ ಪ್ರಶಸ್ತಿ”ಗೆ  ಶಬಾನಾ ಆಜಿ ಭಾರತೀಯ ಖ್ಯಾತ ಹೆಸರಾಂತ ಚಲನಚಿತ್ರ ನಟಿ ಇವರನ್ನು ಆಯ್ಕೆ ಮಾಡಿ ಆದೇಶಿಸಲಾಗಿದೆ.

“ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಸಮಿತಿಯನ್ನು ರಚಿಸಿ ಆದೇಶಿಸಲಾಗಿತ್ತು.  ಈ ಆಯ್ಕೆ ಸಮಿತಿಯು ದಿನಾಂಕ:28/02/2025ರಂದು ಸಭೆ ಸೇರಿ ಅವಿರೋಧವಾಗಿ ಮೂವರು (03) ಸಂಭಾವ್ಯ ಗಣ್ಯರ ಪಟ್ಟಿಯನ್ನು ನೀಡಿತ್ತು. ಇದೀಗ ಮೂವರ ಪೈಕಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ  ಜೀವಮಾನ ಸಾಧನೆ ಪ್ರಶಸ್ತಿಗೆ ಖ್ಯಾತ ನಟಿ ‘ಶಬಾನಾ ಆಜ್ಮಿ’ ಅವರು ಆಯ್ಕೆಯಾಗಿದ್ದಾರೆ.

ಶಬಾನಾ ಅಜ್ಮಿ 18 ಸೆಪ್ಟೆಂಬರ್ 1950 ರಂದು ಜನಿಸಿದರು.  ಭಾರತೀಯ ಚಲನಚಿತ್ರ, ದೂರದರ್ಶನ ಮತ್ತು ರಂಗಭೂಮಿ ನಟಿ. ಹಿಂದಿ ಚಲನಚಿತ್ರೋದ್ಯಮದಲ್ಲಿ ಅವರ ವೃತ್ತಿಜೀವನವು 160 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ .

Key words: Bangalore International Film Festival, actress,  ‘Shabana Azmi, Lifetime Achievement Award