ನೀವು ಒಟ್ಟಿಗೆ ಹೋದ್ರೆ ಕೆಲಸ ಆಗುತ್ತೆ: ವಿರುದ್ದ ಹೋದ್ರೆ ನಮಗೆ ಕಷ್ಟ: ಸಿಎಂ ಮತ್ತು ಡಿಸಿಎಂಗೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು

ಕಲ್ಬುರ್ಗಿ,ಮಾರ್ಚ್,7,2025 (www.justkannada.in):  ರಾಜ್ಯ ಕಾಂಗ್ರೆಸ್‌ ನಲ್ಲಿ ಅಧಿಕಾರ ಹಂಚಿಕೆಯ ಕುರಿತು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬೆಂಬಲಿಗರು ದಿನೇ ದಿನೇ ಪರ ವಿರೋಧ ಹೇಳಿಕೆಗಳನ್ನು  ನೀಡುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (ಅವರು ಒಗ್ಗಟ್ಟಿನ ಪಾಠ ಮಾಡಿದ್ದಾರೆ.

ಕಲಬುರಗಿಯಲ್ಲಿ ಆಯೋಜಿಸಿದ್ದ  ಕಲ್ಯಾಣ ಪಥ’ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಇಬ್ಬರು  ಒಟ್ಟಿಗೆ ಹೋದರೆ ನಮ್ಮ ಭಾಗದಲ್ಲಿ ಕೆಲಸ ಆಗುತ್ತೆ‌. ಹೀಗಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಜೊತೆಗೆ ಹೋಗಬೇಕು.  ಇಬ್ಬರು ವಿರುದ್ದ ಹೋದರೇ ನಮಗೆ ಕಷ್ಟ ಆಗುತ್ತೆ ಎಂದರು.

ಸಿದ್ದರಾಮಯ್ಯ ಮತ್ತು  ಡಿಕೆ ಶಿವಕುಮಾರ್ ಒಗ್ಗಟ್ಟಾಗಿ ಮುಂದೆ ಸಾಗಿ.  ಅಭಿವೃದ್ದಿ ಬಿಟ್ಟು ಬೇರೆ ಮಾತನಾಡಬೇಡಿ ಬೇರೆ ಮಾತನಾಡಿದರೇ ಜನ ಒಪ್ಪಲ್ಲ ಎಂದು ಖರ್ಗೆ ಕಿವಿಮಾತು ಹೇಳಿದರು.

ಸಿದ್ದರಾಮಯ್ಯ ಒಳ್ಳೆಯ ಬಜೆಟ್ ಮಂಡಿಸಿದ್ದಾರೆ.  16 ಬಜೆಟ್ ಮಂಡಿಸಿದ್ದಾರೆ. ಇಷ್ಟು ಬಜೆಟ್ ಮಂಡಿಸಲು ಕಾಂಗ್ರೆಸ್ ಕಾರಣ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Key words: against, CM Siddaramaiah, DCM DK Shivakumar, Mallikarjun Kharge