ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ : DRI ಅಧಿಕಾರಿಗಳಿಂದ ಉದ್ಯಮಿ ಪುತ್ರನ ಬಂಧನ

ಬೆಂಗಳೂರು,ಮಾರ್ಚ್,10,2025 (www.justkannada.in):  ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಖ್ಯಾತ ಉದ್ಯಮಿಯೊಬ್ಬರ ಪುತ್ರನನ್ನು ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ.

ಉದ್ಯಮಿ ಪುತ್ರ ತರುಣ್ ರಾಜು ಎಂಬುವವರನ್ನ ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ. ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಣೆ ಪ್ರಕರಣ ಸಂಬಂಧ, ತರುಣ್ ರಾಜು  ಫೈವ್ ಸ್ಟಾರ್ ಹೋಟೆಲ್ ಮಾಲೀಕನ ತಮ್ಮನ ಮಗನಾಗಿದ್ದು ತೀವ್ರ ವಿಚಾರಣೆ ನಡೆಸಿದ್ದ ಡಿಆರ್ ಐ ಅಧಿಕಾರಿಗಳು, ವಿಚಾರಣೆ ಬಳಿಕ ಉದ್ಯಮಿ ಪುತ್ರ ತರುಣ್ ರಾಜುನನ್ನು ಬಂಧಿಸಿದ್ದಾರೆ.

ರನ್ಯಾ ರಾವ್ ಹಾಗೂ ತರುಣ್ ರಾಜು ಇಬ್ಬರು ಸ್ನೇಹಿತರಾಗಿದ್ದಾರೆ ಎಂದು ತಿಳಿದುಬಂದಿದೆ. ರಾನ್ಯಾ ರಾವ್​ ಅವರ ಕಾಲ್​ ಲಿಸ್ಟ್ ತೆಗೆದು ಕೂಡ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ತರುಣ್ ರಾಜ್ ನಟಿ ರನ್ಯಾ ರಾವ್ ಜೊತೆ ನಿರಂತರ ಸಂಪರ್ಕ‌ದಲ್ಲಿದ್ದ ಬಗ್ಗೆ ಮಾಹಿತಿ ಹೊರಬಿದ್ದಿದೆ.

Key words: Actress, Ranya Rao,  gold, smuggling case, Businessman, son, arrested