ಬೆಂಗಳೂರು,ಮಾರ್ಚ್,12,2025 (www.justkannada.in): ಗ್ಯಾರಂಟಿ ಅನುಷ್ಟಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನ ನೇಮಿಸಿ ಅವರಿಗೆ ಸರ್ಕಾರದ ಹಣದಿಂದ ಸಂಬಳ ನೀಡುವ ಮೂಲಕ ಜನರ ತೆರಿಗೆ ಹಣವನ್ನ ಕಾಂಗ್ರೆಸ್ ಸರ್ಕಾರ ಪೋಲು ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ-ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಗ್ಯಾರಂಟಿ ಅನುಷ್ಟಾನ ಸಮಿತಿಗೆ ವಿರೋಧ ವ್ಯಕ್ತಪಡಿಸಿ ವಿಧಾನಸೌಧದ ಕೆಂಗಲ್ ಪ್ರತಿಮೆ ಎದುರು ಬಿಜೆಪಿ-ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ನಡೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸರ್ಕಾರ ಅಧಿಕಾರಕ್ಕೆ ತಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರಿ ಸಂಬಳ ಪಡೆಯುವ ಹಕ್ಕಿದೆ ಎಂದ ಡಿಸಿಎಂ ಡಿಕೆ ಶಿವಕುಮಾರ್ ಗೆ ಖಡಕ್ ತಿರುಗೇಟು ಕೊಟ್ಟ ವಿಪಕ್ಷ ನಾಯಕ ಆರ್.ಅಶೋಕ್, ಭಿಕ್ಷೆ ಬೇಡಿ ನಿಮ್ಮ ಕಾರ್ಯಕರ್ತರಿಗೆ ಹಣ ನೀಡಿ ಸರ್ಕಾರದ ಹಣವನ್ನಲ್ಲ ಎಂದು ಕುಟುಕಿದರು.
ವಿವಿ ಬದಲು ಕಾಂಗ್ರೆಸ್ ಅನ್ನೇ ಮುಚ್ಚುಬಿಡಿ- ಛಲವಾದಿ ನಾರಾಯಣಸ್ವಾಮಿ ಕಿಡಿ
ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಇರುವವರೆಗೂ ದೇಶ, ರಾಜ್ಯ ಅಭಿವೃದ್ದಿ ಆಗಲ್ಲ. ಮಾನ ಮರ್ಯಾದೆ ಇದ್ರೆ ವಿವಿ ಬದಲು ಕಾಂಗ್ರೆಸ್ ಮುಚ್ಚಿಬಿಡಿ. ಕಾಂಗ್ರೆಸ್ ಮುಚ್ಚಿದರೇ ಏನು ಆಗಲ್ಲ ಕಾಂಗ್ರೆಸ್ ಮುಚ್ಚುಬಿಟ್ಟರೇ ಎಲ್ಲರೂ ಸಹ ಆರಾಮವಾಗಿ ಇರ್ತಾರೆ ಎಂದು ವಾಗ್ದಾಳಿ ನಡೆಸಿದರು.
Key words: Opposition, Guarantee, Implementation, Committee, BJP-JDS, protest