ರಾಜು ಹತ್ಯೆಗೆ ಒಂಬತ್ತು ವರ್ಷ: ಮಸೀದಿ ಪುನರಾರಂಭಕ್ಕೆ ಕುಟುಂಬ ವಿರೋಧ, ರಾಜಕಾರಣಿಗಳ ಆಶ್ವಾಸನೆಗೆ ಆಕ್ರೋಶ.

Nine years after Raju's murder: Family opposition to the resumption of the mosque, outrage over the assurance of politicians.

 

ಮೈಸೂರು, ಮಾ.೧೨,೨೦೨೫: ನನ್ನ ಮಗನ ಸಾವಿಗೆ ಈಗಲಾದರೂ ನ್ಯಾಯ ಕೊಡಿಸಿ. ಮಗನ ಹತ್ಯೆ ನೆನೆದು ಕಣ್ಣೀರಿಟ್ಟ ವೃದ್ಧ ತಾಯಿ. ನಮಗೆ ಈವರಗೆ ಯಾವ ಪಕ್ಷದವರೂ, ಯಾವ ನಾಯಕರು ಸ್ಪಂದಿಸಿಲ್ಲ. ಮಾಧ್ಯಮದ ಬಳಿ ಕ್ಯಾತಮಾರನಹಳ್ಳಿ ರಾಜು ತಾಯಿ ಕಣ್ಣೀರು

ಮೈಸೂರಿನ ಕ್ಯಾತಮಾರನಹಳ್ಳಿ ರಾಜು ಹತ್ಯೆ ವಿವಾದ ಘಟನೆ ನಡೆದು 9 ವರ್ಷದ ಬಳಿಕ ಮುನ್ನಲೆಗೆ ಬಂದ ಮಸೀದಿ ವಿಚಾರ. ಕ್ಯಾತಮಾರನಹಳ್ಳಿ ಮುಖ್ಯ ರಸ್ತೆಯಲ್ಲಿರುವ  ಮಸೀದಿ. Aleema Sadlys Education institution & Masjid-E-Siddique-E-Akbar Trust ಗೆ  ಕಳೆದ 9 ವರ್ಷಗಳಿಂದ ಬೀಗ ಹಾಕಲಾಗಿತ್ತು. ಟ್ರಸ್ಟ್ ಬೀಗ ತೆರೆದು ಕಾರ್ಯ ಪರಾಮರ್ಶಿಸಲು ಚಿಂತನೆ. ಆಸಕ್ತ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳ  ಅಭಿಪ್ರಾಯ ಪಡೆದು ವಿವಾದ ಇತ್ತರ್ಥಕ್ಕೆ ಕೋರ್ಟ್‌ ಸೂಚನೆ. ಸಭೆ ನಡೆಸಲು ಮುಂದಾಗಿರುವ ಜಿಲ್ಲಾಡಳಿತ.

ಈ ಹಿನ್ನೆಲೆಯಲ್ಲಿ ಮೃತ ರಾಜು ಕುಟುಂಬದವರನ್ನು ” ಜಸ್ಟ್‌ ಕನ್ನಡ” ಮಾತನಾಡಿಸಿತು..

ನನ್ನ ಮಗನ ಸಾವಿಗೆ ಈಗಲಾದರೂ ನ್ಯಾಯ ಕೊಡಿಸಿ, ಸರ್ಕಾರದ ಬಳಿ ಅಂಗಲಾಚಿ ಬೇಡಿದ ಕ್ಯಾತಮಾರನಹಳ್ಳಿ ರಾಜು ತಾಯಿ. ನಮಗೆ ನಮ್ಮ ಮಗನ ಸಾವಿಗೆ ನ್ಯಾಯಬೇಕು. ನಮಗೆ ಯಾವುದೇ ಪರಿಹಾರ ಬೇಡ. ನಮ್ಮ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದೇವೆ. ಅಲ್ಲಿ ಮಸೀದಿ ಮಾಡೋದು ಬೇಡ. ಸರ್ಕಾರ ಶಾಲೆ ಸೇರಿದಂತೆ ಬೇರೆ ಏನು ಬೇಕಾದ್ರೂ ಕಟ್ಟಲ್ಲಿ. ಮೈಸೂರಿನಲ್ಲಿ ರಾಜು ತಾಯಿ ಹೇಳಿಕೆ.

ಸರ್ಕಾರಕ್ಕೆ ನಾವು ಏನು ಕೇಳಲ್ಲ, ಅಲ್ಲಿ ಮಸೀದಿ ಕಟ್ಟೋಕೆ ಅವಕಾಶ ನೀಡಬೇಡಿ. ಮಸೀದಿಗೆ ವಿರೋಧ ಮಾಡಿಯೇ ನನ್ನ ಮಗನ ಹತ್ಯೆ ಆಯ್ತು. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ಅಂದ್ರೆ ಅಲ್ಲಿ ಮಸೀದಿ ಆಗಬಾರದು. ಮೈಸೂರಿನಲ್ಲಿ ಕ್ಯಾತಮಾರನಹಳ್ಳಿ ರಾಜು ತಾಯಿ ಹೇಳಿಕೆ

ನಮ್ಮ ಅಣ್ಣನಿಗೆ ಆದ ಗತಿ ಬೇರೆಯವರಿಗೆ ಆಗಬಾರದು, ಯಾರೂ ಮುಂದೆ ಹೋಗಿ ಸಾಯಬೇಡಿ. ಅಣ್ಣನ ಹತ್ಯೆ ನೆನೆದು ಕಣ್ಣೀರಿಡುತ್ತಿರುವ ತಂಗಿ. ಮನೆಗೆ ಮಗ, ಗಂಡನಿಗೆ ಹೆಂಡತಿ, ತಂಗಿಯರಿಗೆ ಅಣ್ಣ, ಮಕ್ಕಳಿಗೆ ಅಪ್ಪ ಇರಲ್ಲ. ಮಾಧ್ಯಮಗಳ ಮೂಲಕ ಕ್ಯಾತಮಾರನಹಳ್ಳಿ ರಾಜು ಸಹೋದರಿ ಕವಿತಾ ಮನವಿ.

ನಮಗೆ ಸರ್ಕಾರವಾಗಲಿ, ರಾಜಕೀಯ ಮುಖಂಡರಾಗಲಿ ಯಾವುದೇ ನೆರವು ನೀಡಿಲ್ಲ. ಕೇವಲ ಭರವಸೆಗಳನ್ನ ಮಾತ್ರ ನೀಡಿದರು. ಅಣ್ಣನ ಮಗನಿಗೆ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ. ಮಕ್ಕಳ ವಿದ್ಯಭ್ಯಾಸದ ಜವಬ್ದಾರಿ ನೋಡಿಕೊಳ್ತೀನಿ ಅಂದ ನಾಯಕರು ಬರ್ಲೇ ಇಲ್ಲ. ನಮ್ಮ ಮನೆಗೆ ಅಮಿತ್ ಶಾ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪಸಿಂಹ, ಪರಮೇಶ್ವರ್ ಸೇರಿ ಎಲ್ಲರೂ ಬಂದ್ರು ಎಲ್ಲಾ ಸರ್ಕಾರಗಳು ಕೇವಲ ಬರೀ ಭರವಸೆ ಕೊಟ್ಟು‌ ಹೋದವು. ವಿವಾದಿತ ಮಸೀದಿ ಪುನಃ ಓಪನ್ ಮಾಡ್ಬೇಡಿ . ಆ ಮಸೀದಿ ವಿಚಾರವಾಗಿಯೇ ನನ್ನಣ್ಣ ರಾಜು ಹತ್ಯೆಯಾಗಿದ್ದು. ಆ ಜಾಗದಲ್ಲಿ ಸರ್ಕಾರ ಶಾಲೆ, ಕಾಲೇಜು, ಗ್ರಂಥಾಲಯ ಏನು ಬೇಕಾದ್ರೂ ಮಾಡಲಿ. ಆ ಜಾಗದಲ್ಲಿ ಮಸೀದಿ ಬೇಡ ಮತ್ತೆ ಗಲಾಟೆ ಆಗೋದು ಬೇಡ. ನಮ್ಮ ರಾಜು ಹತ್ಯೆಯೇ ಇಲ್ಲಿ ಕೊನೆಯಾಗಲಿ. ನಮಗೆ ಅಂದಿನಿಂದ ಯಾರು ಏನು ಸಹಾಯ ಮಾಡಲಿಲ್ಲ. ಯಾವ ಸರ್ಕಾರವೂ ಏನು ಮಾಡಲಿಲ್ಲ. ನಾವು ಸರ್ಕಾರಕ್ಕೆ ಮನವಿ ಮಾಡ್ತೀವಿ . ಮೈಸೂರು ಡಿಸಿ ಅವ್ರಿಗೂ ಮನವಿ ಮಾಡ್ತೀವಿ ಅಲ್ಲಿ ಮಸೀದಿ ಮಾಡೋಕೆ ಅವಕಾಶ ಕೊಡ್ಬೇಡಿ. ನಮ್ಮ ರಾಜು ಹತ್ಯೆಗೆ ನ್ಯಾಯ ಸಿಕ್ಕಿಲ್ಲ. ಆರೋಪಿಗಳು ಹೊರಗಡೆ ಇದ್ದಾರೆ. ಕೇಸ್ ಹಾಕಿಸಿಕೊಂಡು ನಾವು ಕೋರ್ಟ್ ಕಛೇರಿ ಅಳೆಯುತ್ತಿದ್ದೇವೆ. ಮಾಧ್ಯಮದ ಬಳಿ ಅಳಲು ತೋಡಿಕೊಂಡ ರಾಜು ಸಹೋದರಿ ಕವಿತಾ.

ಮಸೀದಿಗಾಗಿ ಮತ್ತೆ ಹತ್ಯೆಗಳು ಆಗುವುದು ಬೇಡ, ಕ್ಯಾತಮಾರನಹಳ್ಳಿ ರಾಜು ಚಿಕ್ಕಪ್ಪ ಹೇಳಿಕೆ. ಮತ್ತಷ್ಟು ಹತ್ಯೆಗಳು ನಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ. ಕ್ಯಾತಮಾರನಹಳ್ಳಿ ಮಸೀದಿ ವಿಚಾರ. ರಾಜ್ಯ ಹತ್ಯೆಯ 9 ವರ್ಷಗಳ ಬಳಿಕ ಮತ್ತೆ ಮುನ್ನಲೆಗೆ ಬಂದ ಮಸೀದಿ ವಿಚಾರ. ಮಸೀದಿಗೆ ಅವಕಾಶ ನೀಡದಂತೆ ರಾಜು ಚಿಕ್ಕಪ್ಪ ಸೋಮಣ್ಣ ಮನವಿ.

ನಮ್ಮ ರಾಜು ಹತ್ಯೆಯಾಗಿದ್ದ ಮಸೀದಿ ವಿಚಾರಕ್ಕೆ, ಇಲ್ಲಿ ಯಾವುದೇ ಕಾರಣಕ್ಕೂ ಮಸೀದಿಗೆ ಅವಕಾಶ ಕೊಡಬಾರದು. ನಮ್ಮ ರಾಜು ಹತ್ಯೆಗೆ ನ್ಯಾಯ ಸಿಗಬೇಕು. ಅಲ್ಲಿ ಸರ್ಕಾರದಿಂದ ಏನು ಬೇಕಾದ್ರೂ ಕಟ್ಟಲಿ , ಆದ್ರೆ ಮಸೀದಿ ಮಾತ್ರ ಬೇಡ. ಸರ್ಕಾರಕ್ಕೆ ನಾವು ಮನವಿ ಮಾಡ್ತೀವಿ.

key words:  Raju’s murder, resumption of the mosque, Mysore, police,

Nine years after Raju’s murder: Family opposition to the resumption of the mosque, outrage over the assurance of politicians.